ಬೆಂಗಳೂರು (ಜು. 31): ಶೋಭಾಗೆ ದಿಲ್ಲಿ ಸೂಟಾಗಲ್ವಂತೆ ಮಾನ್ಸೂನ್ ಅಧಿವೇಶನದಲ್ಲಿ ಸೆಂಟ್ರಲ್ ಹಾಲ್‌ನಲ್ಲಿ ಬಹುಸಮಯ ಕಳೆಯುತ್ತಿರುವ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಯಾರೇ ಸಿಕ್ಕಿದರೂ ನಾನು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ, ನನ್ನದೇನಿದ್ದರೂ ಇನ್ನು ರಾಜ್ಯ ರಾಜಕೀಯ ಎನ್ನುತ್ತಾರೆ.

ಯಾಕೆ ಎಂದು ಯಾರಾದರೂ ಕೇಳಿದರೆ, ಅಯ್ಯೋ ಇಲ್ಲಿ ಮಾಡಲು ಕೆಲಸವೇ ಇಲ್ಲ. ಅಲ್ಲಿ ಎಷ್ಟೊಂದು ಹೋರಾಟ ಮಾಡಲಿಕ್ಕಿದೆ. ನನಗೆ ದಿಲ್ಲಿ ಸೂಟ್ ಆಗೋದಿಲ್ಲ ಬಿಡಿ. ಕರ್ನಾಟಕದ ಹವಾಮಾನ ಎಷ್ಟು  ಚಂದ ಎಂದೆಲ್ಲ ಹೇಳುತ್ತಾರಂತೆ. ಅಂದಹಾಗೆ ಉಡುಪಿಯ ಕಡೆ ಅಷ್ಟಾಗಿ ಹೋಗದ ಅಲ್ಲಿನ ಸಂಸದೆ, ಈಗ ವಿಧಾನ ಪರಿಷತ್ ಮೇಲೆ ಕಣ್ಣಿಟ್ಟಿದ್ದಾರಂತೆ.

ಆದರೆ ಬಿಜೆಪಿಯ ಉಳಿದ ನಾಯಕರು  ಖಾಸಗಿಯಾಗಿ ಹೇಳುವ ಪ್ರಕಾರ, ಯಡಿಯೂರಪ್ಪನವರು ಶೋಭಾರನ್ನು ರಾಜ್ಯ ರಾಜಕೀಯಕ್ಕೆ ಒಯ್ಯಲು ಎಷ್ಟು ಪ್ರಯತ್ನ ಹಾಕುತ್ತಾರೋ ಅಷ್ಟೇ ವಿರುದ್ಧ ಪ್ರಯತ್ನವನ್ನು ಉಳಿದವರು ಮಾಡುತ್ತಾರೆ. ಅರ್ಥ ಏನು ಅಂದರೆ, ಇನ್ನೊಂದು ಹಗ್ಗಜಗ್ಗಾಟ. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇದನ್ನು ಕ್ಲಿಕ್ಕಿಸಿ