ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ. ಮುಖ್ಯಮಂತ್ರಿ ಯಾವ ಊರಿಗೆ ಹೋದರೂ ಹೆಣ ಬೀಳುತ್ತೆ. ಮುಖ್ಯಮಂತ್ರಿ ಯಾವ ಊರಿಗೆ ಹೋದರೂ ಅಪರಾಧಿಗಳನ್ನು ರಕ್ಷಿಸುತ್ತಾರೆ. ಮಂಗಳೂರಿಗೆ ಹೋದರೆ ಶರತ್ ಹೆಣ, ಉತ್ತರ ಕನ್ನಡಕ್ಕೆ ಹೋದರೆ ಪರೇಶನ ಹೆಣ, ವಿಜಯಪುರಕ್ಕೆ ಹೋದರೆ ದಾನಮ್ಮಳ ಹೆಣ ಬೀಳುತ್ತೆ ಎಂದು ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ (ಡಿ.24): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ. ಮುಖ್ಯಮಂತ್ರಿ ಯಾವ ಊರಿಗೆ ಹೋದರೂ ಹೆಣ ಬೀಳುತ್ತೆ. ಮುಖ್ಯಮಂತ್ರಿ ಯಾವ ಊರಿಗೆ ಹೋದರೂ ಅಪರಾಧಿಗಳನ್ನು ರಕ್ಷಿಸುತ್ತಾರೆ. ಮಂಗಳೂರಿಗೆ ಹೋದರೆ ಶರತ್ ಹೆಣ, ಉತ್ತರ ಕನ್ನಡಕ್ಕೆ ಹೋದರೆ ಪರೇಶನ ಹೆಣ, ವಿಜಯಪುರಕ್ಕೆ ಹೋದರೆ ದಾನಮ್ಮಳ ಹೆಣ ಬೀಳುತ್ತೆ ಎಂದು ಶೋಭಾ ಕರಂದ್ಲಾಜೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ಅಫೀಮು, ಗಾಂಜಾ ಅಡ್ಡೆಯಾಗಿದೆ. ಜಿಹಾದಿಗಳು ಮುಸ್ಲಿಂ ಹೆಚ್ಚಿರುವ ಪ್ರದೇಶದಲ್ಲಿ ಗಾಂಜಾ,ಅಫೀಮು ಮಾರಾಟ ಮಾಡಿ ನಮ್ಮ ಹುಡುಗರನ್ನು ಕೆಡಿಸುತ್ತಿದ್ದಾರೆ. ಎಲ್ಲಿದ್ದಾರೆ ಎಂ.ಬಿ.ಪಾಟೀಲರು ಎಲ್ಲಿದೆ ಸರ್ಕಾರ ಆ ಹುಡುಗಿಯನ್ನು ಆಸ್ಪತ್ರೆ ಸೇರಿಸುವದರಿಂದ ಹಿಡಿದು ಅಂತ್ಯ ಸಂಸ್ಕಾರದವರೆಗೂ ನಮ್ಮ ಕಾರ್ಯಕರ್ತರು ಭಾಗವಹಿಸಿದ್ದಾರೆ. ನಿಮ್ಮ ಕಾರ್ಯಕರ್ತರು ಸಾಧನಾ ಸಮಾವೇಶದಲ್ಲಿದ್ದರು ಎಂದು ಗುಡುಗಿದ್ದಾರೆ. ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಶೋಭಾ ಕರಂದ್ಲಾಜೆ ಭಾಷಣ ಮಾಡುತ್ತಾ ಈ ಮಾತನ್ನು ಹೇಳಿದ್ದಾರೆ.
