ಭೋಪಾಲ್ :  ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಾಮೈದಾ ಕಾಂಗ್ರೆಸಿಗೆ ಸೇರ್ಪಡೆಯಾಗಿದ್ದಾರೆ. 

ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ನೇತೃತ್ವದಲ್ಲಿ ಸಂಜಯ್ ಸಿಂಗ್ ಮಸಾನಿ ಶನಿವಾರ ದಿಲ್ಲಿಯಲ್ಲಿ ಪಕ್ಷವನ್ನು ಸೇರಿದ್ದಾರೆ. 

ಭಾರತೀಯ ಜನತಾ ಪಾರ್ಟಿ ಯಿಂದ ವರಸಿಯೋನಿ ಕ್ಷೇತ್ರದ ಟಿಕೆಟ್ ಬಯಸಿದ್ದರು. ಆದರೆ ಇಲ್ಲಿನ ಟಿಕೆಟ್ ನ್ನು ಶಾಸಕ ಯೋಕೇಂದ್ರ ನಿರ್ಮಲ್ ಅವರನ್ನು ಕಣಕ್ಕಿಳಿಸಲಾಗಿದೆ.  

ಇದರಿಂದ ಅಸಮಾಧಾನಗೊಂಡ ಸಂಜಯ್ ಸಿಂಗ್ ಕಾಂಗ್ರೆಸ್ ಕೈ ಹಿಡಿದಿದ್ದಾರೆ. 

ಕಳೆದ ವಾರವಷ್ಟೇ ರಾಹುಲ್ ಗಾಂಧಿ ಮಧ್ಯ ಪ್ರದೇಶದಲ್ಲಿ  ರ್ಯಾಲಿ ನಡೆಸಿದ್ದರು.  ಸಂಜಯ್ ಅವರು ಮೂಲತಃ ಯಾವುದೇ  ರೀತಿ ರಾಜಕೀಯದಲ್ಲಿ ಗುರುತಿಸಿಕೊಂಡಿರಲಿಲ್ಲ. 

ಆದರೆ ವರಸಾನಿ ಕ್ಷೇತ್ರದಲ್ಲಿ ಹಲವು ರೀತಿಯಲ್ಲಿ ಗುರುತಿಸಿಕೊಂಡು ಬಿಜೆಪಿಯಿಂದ ಟಿಕೆಟ್ ಬಯಸಿದ್ದರು. ಇದೀಗ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಕೈ ಹಿಡಿದಿದ್ದಾರೆ.