ಸಮಾಜವಾದಿ ಪಕ್ಷದ ಪರಿತ್ಯಕ್ತ ಮುಖಂಡ ಶಿವಪಾಲ್ ಯಾದವ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಲು ಸಕಲ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.
ಲಕ್ನೋ : ಪರಿತ್ಯಕ್ತ ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಯಾದವ್ ಇದೀಗ ತಮ್ಮದೇ ಆದ ನೂತನ ಪಕ್ಷದ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
ತಮ್ಮದೇ ಆದ ನೂತನ ಪ್ರಗತಿ ಶೀಲ ಸಮಾಜವಾದಿ ಪಕ್ಷ ಎಂಬ ಹೆಸರಿನಲ್ಲಿ ನೋಂದಣಿ ಮಾಡಲು ಶಿವಪಾಲ್ ಯಾದವ್ ಇದೀಗ ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.
ಅಲ್ಲದೇ ಪಕ್ಷದ ಚಿಹ್ನೆಯಾಗಿ ಕಾರು, ಬೈಕ್ ಅಥವಾ ಚಕ್ರವನ್ನು ನೀಡಲು ಕೇಳಿಕೊಂಡಿದ್ದು ಈ ಮೂಲಕ ತಮ್ಮ ಕುಟುಂಬ ಸದಸ್ಯರಿಗೆ ಸಡ್ಡು ಹೊಡೆಯುವ ಸಕಲ ಯತ್ನವನ್ನು ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಸಹೋದರ ಮುಲಾಯಂ ಸಿಂಗ್ ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಕೊಂಡಿದ್ದ ಶಿವಪಾಲ್ ಅವರಿಗೆ ನಿರಾಶೆ ಕಾದಿತ್ತು. ಅದಕ್ಕೆ ಕಾರಣವಾಗಿದ್ದು, ಸಮಾಜವಾದಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪುತ್ರ ಅಖಿಲೇಶ್ ಯಾದವ್ ಜೊತೆಗೆ ಮುಲಾಯಂ ಸಿಂಗ್ ಯಾದವ್ ಅವರು ಕಾಣಿಕೊಂಡಿದ್ದರು.
ಇದರಿಂದ ಸಂಪೂರ್ಣವಾಗಿ ನಿರಾಸೆಗೊಂಡ ಶಿವಪಾಲ್ ಯಾದವ್ ಇದೀಗ ತಮ್ಮದೇ ಆದ ನೂತನ ಪಕ್ಷವನ್ನು ಆರಮಭಿಸಿ ಚುನಾವಣಾ ಕಣಕ್ಕೆ ಇಳಿಯುವ ತಯಾರಿ ಮಾಡಿಕೊಂಡಿದ್ದಾರೆ.
