ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ

Shivasena Will contest 2019 Lok Sabha elections alone
Highlights

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮನ್ನು ಭೇಟಿ ಮಾಡಿದ ಮಾರನೇ ದಿನವೇ  ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಬಿಜೆಪಿಯನ್ನು ಕಟುವಾಗಿ ಟೀಕಿಸಿ ದ್ದಾರೆ. ಇದೆಲ್ಲವೂ ಪೂರ್ಣ ನಾಟಕ ಎಂದು ಕಿಡಿಕಾರಿದ್ದಾರೆ.

ಮುಂಬೈ/ ಪಾಲ್ಘಾರ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮನ್ನು ಭೇಟಿ ಮಾಡಿದ ಮಾರನೇ ದಿನವೇ  ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಬಿಜೆಪಿಯನ್ನು ಕಟುವಾಗಿ ಟೀಕಿಸಿ ದ್ದಾರೆ. ಇದೆಲ್ಲವೂ ಪೂರ್ಣ ನಾಟಕ ಎಂದು ಕಿಡಿಕಾರಿದ್ದಾರೆ. ಪಾಲ್ಘಾರ್‌ನಲ್ಲಿ ಪಕ್ಷದ ಕಾರ್ಯಕರ್ತರ  ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. 

ಇದೇ ವೇಳೆ ಪಾಲ್ಘಾರ್ ನಲ್ಲಿ ಪಕ್ಷದ ಸೋಲಿಗೆ ಪ್ರತಿಕ್ರಿಯಿಸಿದ ಅವರು, ಒಂದು ಉಪಚುನಾ ವಣೆ ಗೆಲ್ಲಲು ಬಿಜೆಪಿ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಿತು ಎಂದು ಪರೋಕ್ಷವಾಗಿ ಇವಿಎಂಗಳ ಅಸಮರ್ಪಕ ಕಾರ್ಯನಿರ್ವಹಣೆ ಯನ್ನು ಪ್ರಸ್ತಾಪಿಸಿದರು.

ಈ ನಡುವೆ 2019ರ ಲೋಕಸಭಾ ಚುನಾ ವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸು ವುದಾಗಿ ಶಿವಸೇನೆ ಸ್ಪಷ್ಟಪಡಿಸಿದೆ. 

loader