ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ ಶಿವರಾಜ್ ತಂಗಡಗಿ

First Published 28, Feb 2018, 12:24 PM IST
Shivaraj Thangadagi Contest From Kanagiri
Highlights

ಇದು ಮೀಸಲು ಕ್ಷೇತ್ರ. ಇಲ್ಲಿ ಗೆದ್ದವರು ಸಚಿವರಾಗುತ್ತಾರೆ ಎನ್ನುವ ನಂಬಿಕೆ ಇದೆ. ನಾಗಪ್ಪ ಸಾಲೋಣಿ, ಮಲ್ಲಿಕಾರ್ಜುನ ನಾಗಪ್ಪ ಹಾಗೂ ಎರಡು ಬಾರಿ ಶಾಸಕರಾಗಿರುವ ಶಿವರಾಜ ತಂಗಡಗಿ ಅವರು ಇಲ್ಲಿಂದ ಗೆದ್ದು ಸಚಿವರಾಗಿದ್ದರು

ಕೊಪ್ಪಳ : ಇದು ಮೀಸಲು ಕ್ಷೇತ್ರ. ಇಲ್ಲಿ ಗೆದ್ದವರು ಸಚಿವರಾಗುತ್ತಾರೆ ಎನ್ನುವ ನಂಬಿಕೆ ಇದೆ. ನಾಗಪ್ಪ ಸಾಲೋಣಿ, ಮಲ್ಲಿಕಾರ್ಜುನ ನಾಗಪ್ಪ ಹಾಗೂ ಎರಡು ಬಾರಿ ಶಾಸಕರಾಗಿರುವ ಶಿವರಾಜ ತಂಗಡಗಿ ಅವರು ಇಲ್ಲಿಂದ ಗೆದ್ದು ಸಚಿವರಾಗಿದ್ದರು.

ಕಾಂಗ್ರೆಸ್ಸಿಂದ ಮತ್ತೆ ಸ್ಪರ್ಧಿಸುತ್ತಿರುವ ತಂಗಡಗಿ ಹ್ಯಾಟ್ರಿಕ್ ಜಯ ಸಾಧಿಸುವ ತವಕದಲ್ಲಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ. ದಡೆಸ್ಗೂರು ಬಸವರಾಜ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಯಡಿಯೂರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ.

ಕೆಜೆಪಿಯಿಂದ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂಬ ಅಪಸ್ವರ ಎದ್ದಿದೆ. ಈ ನಡುವೆ ಬಿಎಸ್‌ಆರ್ ಕಾಂಗ್ರೆಸ್ಸಿನಿಂದ ಬಿಜೆಪಿ ಸೇರಿರುವ ಮುಕುಂದರಾವ್ ಭವಾನಿಮಠ ತಾವೂ ಆಕಾಂಕ್ಷಿ ಎನ್ನುತ್ತಿದ್ದಾರೆ. ಜೆಡಿಎಸ್‌ನಿಂದ ಡಿ.ಎಂ. ಮಂಜುಳಾಗೆ ಟಿಕೆಟ್ ಸಿಕ್ಕಿದ್ದು, ಅಸಮಾಧಾನ ಸೃಷ್ಟಿಯಾಗಿದೆ. ಹೀಗಾಗಿ ಜೆಡಿಎಸ್ ತನ್ನ ಅಭ್ಯರ್ಥಿ ಬದಲಿಸುವ ಸಾಧ್ಯತೆ ಇದೆ.

loader