ಸುವರ್ಣ ನ್ಯೂಸ್ ಮಾನವೀಯ ವರದಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸ್ಪಂದಿಸಿದ್ದಾರೆ. ನೆಚ್ಚಿನ ಅಭಿಮಾನಿಯನ್ನ ಭೇಟಿಯಾಗಲು ಮುಂದಾದ ನಟ ಶಿವರಾಜ್ ಕುಮಾರ್ ಆಪ್ತ ಸಹಾಯಕರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನನ್ನು ತನ್ನ ನಿವಾಸಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದಾರೆ.

ಮೈಸೂರು(ಮಾ.06): ಸುವರ್ಣ ನ್ಯೂಸ್ ಮಾನವೀಯ ವರದಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸ್ಪಂದಿಸಿದ್ದಾರೆ. ನೆಚ್ಚಿನ ಅಭಿಮಾನಿಯನ್ನ ಭೇಟಿಯಾಗಲು ಮುಂದಾದ ನಟ ಶಿವರಾಜ್ ಕುಮಾರ್ ಆಪ್ತ ಸಹಾಯಕರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನನ್ನು ತನ್ನ ನಿವಾಸಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದಾರೆ.

ಎರಡೂ ಕಿಡ್ನಿ ವೈಫಲ್ಯದಿಂದ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಜಯಕುಮಾರ್ ಹ್ಯಾಟ್ರಿಕ್ ಹೀರೋ ಶಿವರ್ಆಜ್'ಕುಮಾರ್'ರವರ ಅಭಿಮಾನಿ. ತಾನು ಇನ್ನು ಕೆಲವೇ ದಿನಗಳು ಬದುಕುವುದೆಂದು ತಿಳಿದಿದ್ದರೂ ತನ್ನ ನೆಚ್ಚಿನ ನಟನನ್ನು ನೋಡುವುದೇ ಈತನ ಆಸೆಯಾಗಿತ್ತು. ಈ ಕುರಿತಾಗಿ ಸುವರ್ಣ ನ್ಯೂಸ್' ಹಾಗೂ ಕನ್ನಡ ಪ್ರಭ ವರದಿ ಮಾಡಿತ್ತು. ಇದೀಗ ತನ್ನ ನೆಚ್ಚಿನ ಅಭಿಮಾನಿ ಜಯಕುಮಾರ್'ನನ್ನ ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಸಿಕೊಳ್ಳಲು ನಿರ್ಧರಿಸಿರುವ ಶಿವಣ್ಣ , ಸ್ವತಃ ಕಾಳಜಿ ವಹಿಸಿ ಆ್ಯಂಬುಲೆನ್ಸ್ ಮೂಲಕ ತಮ್ಮ ನಿವಾಸಕ್ಕೆ ಕರೆಸಿಕೊಳ್ಳಲಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದರೆ ಅಭಿಮಾನಿ ಜೊತೆ ಸಮಯ ಕಳೆಯಲು ಸಾಧ್ಯವಾಗುದಿಲ್ಲ, ಹೀಗಾಗಿ ತಮ್ಮ ನಿವಾಸದಲ್ಲಿ ಅಭಿಮಾನಿ ಜೊತೆ ಸ್ವಲ್ಪ ಸಮಯ ಕಳೆಯಲು ಚಿಂತಿಸಿರುವ ಹ್ಯಾಟ್ರಿಕ್ ಹೀರೋ ಆತನ ಚಿಕಿತ್ಸಾ ವೆಚ್ಚ ಭರಿಸುವುದಾಗಿಯೂ ತಿಳಿಸಿದ್ದಾರೆ.