ಶಿವಮೊಗ್ಗದಿಂದ ಪ್ರತಿದಿನ ಬೆಳಗ್ಗೆ 6.30ಕ್ಕೆ ಹೊರಡುತ್ತಿದ್ದ ಇಂಟರ್'ಸಿಟಿ ರೈಲು ಇದೀಗ 6.40ಕ್ಕೆ ಹೊರಡುತ್ತಿದ್ದು, ಬೆಂಗಳೂರಿಗೆ ಈ ರೈಲು 11.35ಕ್ಕೆ ತಲುಪಲಿದೆ.

ಶಿವಮೊಗ್ಗ(ನ.04): ಶಿವಮೊಗ್ಗ ಜನರ ಬಹುದಿನ ಕನಸೊಂದು ನನಸಾಗಿದ್ದು, ಶಿವಮೊಗ್ಗ-ಬೆಂಗಳೂರು ಪಯಣ ಇನ್ನಷ್ಟು ಸುಲಭವಾಗಲಿದೆ. ಹೌದು ಇಂಟರ್'ಸಿಟಿ ಎಕ್ಸ್'ಪ್ರೆಸ್ ರೈಲನ್ನು ನವೆಂಬರ್ 1ರಿಂದ ಸೂಪರ್ ಫಾಸ್ಟ್ ರೈಲಾಗಿ ಮೇಲ್ದರ್ಜೆಗೇರಿಸಲಾಗಿದೆ.

ಶಿವಮೊಗ್ಗದಿಂದ ಪ್ರತಿದಿನ ಬೆಳಗ್ಗೆ 6.30ಕ್ಕೆ ಹೊರಡುತ್ತಿದ್ದ ಇಂಟರ್'ಸಿಟಿ ರೈಲು ಇದೀಗ 6.40ಕ್ಕೆ ಹೊರಡುತ್ತಿದ್ದು, ಬೆಂಗಳೂರಿಗೆ ಈ ರೈಲು 11.35ಕ್ಕೆ ತಲುಪಲಿದೆ.

ಹಾಗೆಯೇ ಇಷ್ಟುದಿನ ಬೆಂಗಳೂರಿನಿಂದ 3.30ಕ್ಕೆ ಶಿವಮೊಗ್ಗ ಕಡೆ ಹೊರಡುತ್ತಿದ್ದ ರೈಲಿನ ವೇಳಾಪಟ್ಟಿ ಕೂಡಾ ಬದಲಾಗಿದ್ದು, ಇದೀಗ ಈ ಇಂಟರ್'ಸಿಟಿ ರೈಲು ಮಧ್ಯಾಹ್ನ 3 ಗಂಟೆಗೆ ಹೊರಡುತ್ತಿದ್ದು, ರಾತ್ರಿ 8 ಗಂಟೆಗೆ ಶಿವಮೊಗ್ಗ ತಲುಪಲಿದೆ.

ಅಲ್ಲದೇ ಟಿಕೆಟ್ ದರದಲ್ಲೂ ಸ್ವಲ್ಪ ವ್ಯತ್ಯಾಸವಾಗಿದ್ದು, ಇದುವರೆಗೆ 95 ರುಪಾಯಿಯಿದ್ದ ಟಿಕೆಟ್ ದರ 15 ರುಪಾಯಿ ಹೆಚ್ಚಳವಾಗಿದ್ದು, ಇನ್ಮುಂದೆ 110 ರುಪಾಯಿ ಆಗಲಿದೆ.