ತುಮಕೂರು[ಜ.21]  ಸ್ವಾಮೀಜಿಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಮಠದ ಪ್ರಕಟಣೆ ತಿಳಿಸಿರುವಂತೆ ಸ್ವಾಮೀಜಿ ಸೋಮವಾರ ಬೆಳಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ. ಆದರೆ ಘೋಷಣೆಯನ್ನು 1.56ಕ್ಕೆ ಮಾಡಲಾಯಿತು.

ಇದಕ್ಕೂ ಕಾರಣ ಇದೆ.  ವಿದ್ಯಾರ್ಥಿಗಳು ಅನ್ನವನ್ನು ಸ್ವೀಕರಿಸಿದ ನಂತರವೇ ತನ್ನ ನಿಧನದ ಸುದ್ದಿ ಪ್ರಕಟ ಮಾಡಿ ಎಂದು ಸ್ವಾಮೀಜಿ ಒಮ್ಮೆ ಹೇಳಿಕೊಂಡಿದ್ದರಂತೆ. ಅದರಂತೆ ಮಕ್ಕಳು ಆಹಾರ ಸ್ವೀಕರಿಸಿದ ಮೇಲೆ ಸುದ್ದಿ ಪ್ರಕಟ ಮಾಡಲಾಯಿತು.

ನಡೆದಾಡುವ ದೇವರು  ಬಿಟ್ಟು ಹೋದ ದಾರಿ

ಅಪಾರ ಭಕ್ತಗಣವನ್ನು ಬಿಟ್ಟು ನಡೆದಾಡುವ ದೇವರು ನಡೆದಿದ್ದಾರೆ. ಆದರೆ ಅವರು ಬಿಟ್ಟು ಹೋದ ನಂಬಿಕೆ, ಶ್ರದ್ಧೆ, ವಿಶ್ವಾಸ ಎಂದೆಂದಿಗೂ ಶಾಶ್ವತವಾಗಿರುತ್ತದೆ.

ತುಮಕೂರು: ಮಾರ್ಗ ಬದಲಾವಣೆ; ಯಾರು ಹೇಗೆ ಹೋಗ್ಬೇಕು? ಫುಲ್ ಡೀಟೆಲ್ಸ್...