ಬೆಂಗಳೂರು (ಜು.09):  ಕರ್ನಾಟಕ ರಾಜಕೀಯದಲ್ಲಿ ರಾಜೀನಾಮೆ ಹೈ ಡ್ರಾಮಾ ಮುಂದುವರಿದಿದೆ. ಕೈ ಪಡೆಯ ಮತ್ತೊಂದು ವಿಕೆಟ್ ಪತನವಾಗಿದೆ

13 ಶಾಸಕರ ರಾಜೀನಾಮೆ ಬೆನ್ನಲ್ಲೇ ಇದೀಗ 14ನೇ  ವ್ಯಕ್ತಿಯಾಗಿ ಮತ್ತೊಬ್ಬ ಪ್ರಭಾವಿ ನಾಯಕರಾಗಿದ್ದ, ಶಿವಾಜಿನಗರ ಶಾಸಕ ರೋಷನ್ ಬೇಗ್  ರಾಜೀನಾಮೆ ನೀಡಿದ್ದಾರೆ. 

ಶಾಸಕ ಸ್ಥಾನಕ್ಕೆ ಸ್ಪೀಕರ್ ರಮೇಶ್ ಕುಮಾರ್ ಬಳಿ ರೋಷನ್ ಬೇಗ್ ರಾಜೀನಾಮೆ ನೀಡಿದ್ದಾರೆ. ಸ್ವಯಂ ಪ್ರೇರಣೆಯಿಂದಾಗಿ ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ. 

ಅಸಮಾಧಾನಗೊಂಡ ನಾಯಕ ಬಿಜೆಪಿ ಸೇರೋದಾಗಿ ಈಗಾಗಲೇ ಪ್ರಕಟಿಸಿದ್ದಾರೆ. ಇದೀಗ ಒಂದಾದ ಮೇಲೊಂದು ರಾಜೀನಾಮೆ ಮೈತ್ರಿಪಕ್ಷಗಳ ನಾಯಕರನ್ನು ಭಾರೀ ಸಂಕಟಕ್ಕೆ ದೂಡಿದ್ದು, ಸರ್ಕಾರ ಪತನವಾಗುವ ಸನ್ನಿವೇಶ ಸೃಷ್ಟಿಯಾಗಿದೆ.