ಮುಂಬೈ[ಮೇ.26]: ಎನ್‌ಡಿಎ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿರುವ ಶಿವಸೇನೆ ಮೋದಿ ಅವರ ಸಚಿವ ಸಂಪುಟದಲ್ಲಿ ಕನಿಷ್ಠ ನಾಲ್ಕು ಸಂಸದರಿಗೆ ಸ್ಥಾನ ಸಿಗುತ್ತದೆನ್ನುವ ನಿರೀಕ್ಷೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಅವರ ಪುತ್ರ ಆದಿತ್ಯ ಠಾಕ್ರೆ, ಶಿವಸೇನೆ ಕಾರ್ಯದರ್ಶಿ ಮಿಲಿಂದ್‌ ನಾರ್ವೇಕರ್‌ ಈಗಾಗಲೇ ನವದೆಹಲಿ ತಲುಪಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದಾರೆ. ಎನ್‌ಡಿಎಯಲ್ಲಿನ ಮಿತ್ರ ಪಕ್ಷಗಳ ಪೈಕಿ ಶಿವಸೇನೆ ಎರಡನೇ ಅತಿದೊಡ್ಡ ಪಕ್ಷವಾಗಿದ್ದು, ಕಡೇ ಪಕ್ಷ 4 ಸಚಿವ ಸ್ಥಾನ ನೀಡುತ್ತಾರೆನ್ನುವ ನಿರೀಕ್ಷೆ ಶಿವಸೇನೆ ನಾಯಕರದ್ದಾಗಿದೆ.

ಮೋದಿ ಶಿವಸೇನೆಯ ಈ ಬೇಡಿಕೆಯನ್ನು ಪೂರೈಸುತ್ತಾರಾ? ಸಂಪುಟದಲ್ಲಿ 4 ಸ್ಥಾನ ನೀಡುತ್ತಾರಾ? ಈ ಪ್ರಶ್ನೆಗಳಿಗೆ ಕಲವೇ ಉತ್ತರಿಸಲಿದೆ