ಮುಂಬೈ[ಜೂ.20]: ‘ಮಹಾರಾಷ್ಟ್ರದ ಮುಂದಿನ ಮುಖ್ಯ ಮಂತ್ರಿ ಶಿವಸೇನೆ ಅಭ್ಯರ್ಥಿ’ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಬಿಜೆಪಿ ಜೊತೆ ಮೈತ್ರಿ ವೇಳೆಯೇ ಇದು ನಿರ್ಧಾರವಾಗಿದೆ. ಶಿವಸೇನೆಯ ಆಡಳಿತದ ವೈಖರಿಯೇ ಭಿನ್ನ ಎಂದು ಪ್ರಕಟಿಸಿದೆ. ಈ ಮೂಲಕ ಬಿಜೆಪಿ ಜೊತೆ ಸಿಎಂ ಹುದ್ದೆ ಸಂಬಂಧ ನೇರಾನೇರ ಹೋರಾಟಕ್ಕೆ ಇಳಿದಿದೆ.

ಕೆಲ ದಿನಗಳ ಹಿಂದಷ್ಟೇ ಬಿಜೆಪಿ ನಾಯಕರು, ಮುಂದಿನ ಸಿಎಂ ನಮ್ಮ ಪಕ್ಷ ದಿಂದಲೇ ಆಗಲಿದ್ದಾರೆ ಎಂದಿದ್ದರು. ಇದೇ ವರ್ಷಾಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ - ಶಿವಸೇನೆ ಮೈತ್ರಿ ಮಾಡಿಕೊಂಡಿವೆ.