ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ, ಗಾಯಕ್ವಾಡ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ತನಿಖೆಯಾಗಬೇಕೆಂದು ನಾವು ಆಗ್ರಹಿಸದ್ದೇವೆ, ಎಂದು ಪಕ್ಷದ ಮುಖಂಡೆ ಮನೀಶಾ ಕಾಯಂಡೆ ಹೇಳಿದ್ದಾರೆ.

ಮುಂಬೈ (ಮಾ.25): ಏರ್ ಇಂಡಿಯಾ ಅಧಿಕಾರಿಯೊಂದಿಗೆ ದುರ್ವತನೆ ತೋರಿದ ಸಂಸದ ರವೀಂದ್ರ ಗಾಯಕ್ವಾಡ್ ಕ್ರಮ ಸರಿಯಲ್ಲವೆಂದು ಶಿವಸೇನೆ ಇಂದು ಹೇಳಿದೆ.

ಪಕ್ಷವು ಅಂತಹ ವರ್ತನೆಯನ್ನು ಬೆಂಬಲಿಸುವುದಿಲ್ಲ, ಗಾಯಕ್ವಾಡ್ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆಯನ್ನು ಭೇಟಿಯಾಗಲಿದ್ದಾರೆ ಎಂದು ಪಕ್ಷದ ಮುಖಂಡೆ ಮನೀಶಾ ಕಾಯಾಂಡೆ ಹೇಳಿದ್ದಾರೆ.

ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ, ಗಾಯಕ್ವಾಡ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ತನಿಖೆಯಾಗಬೇಕೆಂದು ನಾವು ಆಗ್ರಹಿಸದ್ದೇವೆ, ಎಂದು ಕಾಯಂಡೆ ಹೇಳಿದ್ದಾರೆ.

ಏರ್ ಇಂಡಿಯಾ ಹಾಗೂ ಇತರ 6 ಖಾಸಗಿ ವಿಮಾನಯಾನ ಸಂಸ್ಥೆಗಳು ಗಾಯಕ್ವಾಡ್’ಗೆ ನಿಷೇಧ ಹೇರಿದ್ದು, ನಿನ್ನೆ ದೆಹಲಿಯಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸಬೇಕಾಯಿತು.