ಇದು ಆರಂಭವಷ್ಟೇ: ರಾಹುಲ್ ಕೊಂಡಾಡಿದ ಶಿವಸೇನೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 21, Jul 2018, 1:14 PM IST
Shiv Sena Cheers Rahul Gandhi On Lok Sabha Speech
Highlights

ರಾಹುಲ್ ಭಾಷಣ ಕೊಂಡಾಡಿದ ಶಿವಸೇನೆ

ರಾಹುಲ್ ಗಾಂಧಿ ರಾಜಕೀಯ ಗ್ರಾಫ್ ಏರಿದೆ

ರಾಹುಲ್ ಭಾಷಣವನ್ನು ಅದ್ಭುತ ಎಂದ ರಾವತ್

ರಾಹುಲ್ ಅಪ್ಪುಗೆ ಜನತಂತ್ರದ ವಿಜಯ

ನವದೆಹಲಿ(ಜು.21): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಎನ್ ಡಿಎ ಅಂಗಪಕ್ಷ ಶಿವಸೇನೆ ಕೊಂಡಾಡಿದೆ. ರಾಹುಲ್ ಭಾಷಣವನ್ನು ‘ಇದೊಂದು ಆರಂಭವಷ್ಟೇ’ ಎಂದು ಬಣ್ಣಿಸಿರುವ ಶಿವಸೇನೆ, ರಾಹುಲ್ ಅವರ ರಾಜಕೀಯ ಗ್ರಾಫ್ ಏರುತ್ತಿದೆ ಎಂದು ಹೇಳಿದೆ.

ಈ ಕುರಿತು ಮಾತನಾಡಿರುವ ಶಿವಸೇನೆ ಮುಖಂಡ ಸಂಜಯ್ ರಾವತ್, ರಾಹುಲ್ ಅವರ ನಿನ್ನೆಯ ಭಾಷಣ ನಿಜಕ್ಕೂ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ರಾಹುಲ್ ಪ್ರಸ್ತಾಪಸಿದ ಅಂಶಗಳು ಖಂಡಿತ ದೇಸದ ಜನರನ್ನು ಮುಟ್ಟಿವೆ ಎಂದು ರಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಹುಲ್ ರಾಜಕೀಯವಾಗಿ ಪಳಗುತ್ತಿದ್ದು, ಇದು ಅಧಿಕಾರದಲ್ಲಿರುವವರ ನಿದ್ದೆಗೆಡಿಸಿರುವುದು ಸುಳ್ಳಲ್ಲ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಭಾಷಣದ ಬಳಿಕ ರಾಹುಲ್ ಪ್ರಧಾನಿ ಅವರನ್ನು ಅಪ್ಪಿಕೊಂಡಿರುವುದು ಜನತಂತ್ರದ ವಿಜಯ್ ಎಂದು ಬಣ್ಣಿಸಿರುವ ಅವರು, ರಾಹುಲ್ ಅಪ್ಪುಗೆಯ ಬಳಿಕ ಮೋದಿ ಆಘಾತದಲ್ಲಿದ್ದರು ಎಂದು ಹೇಳಿದ್ದಾರೆ.

ಇದೇ ವೇಳೆ ನಿನ್ನೆಯ ಅವಿಶ್ವಾಸ ನಿರ್ಣಯ ಮಂಡನೆ ಗೊತ್ತುವಳಿ ಚರ್ಚೆ ಸಂದರ್ಭದಲ್ಲಿ ಶಿವಸೇನೆ ಸದಸನಕ್ಕೆ ಗೈರಾಗಿರುವುದನ್ನು ಸಂಜಯ್ ರಾವತ್ ಸಮರ್ಥಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಶಿವಸೇನೆಯ ನಿಲುವು ತುಂಬ ಸ್ಪಷ್ಟವಾಗಿದೆ ಎಂದೂ ಅವರು ಹೇಳಿದ್ದಾರೆ.

loader