Asianet Suvarna News Asianet Suvarna News

ಬಿಎಸ್‌ವೈ-ಶೋಭಾ ಸಂಧಾನ ಯತ್ನ: ಪಟ್ಟು ಬಿಡದ ಶಿರೂರು ಶ್ರೀಗಳು

ಉಡುಪಿಯಲ್ಲಿ ಬಿಜೆಪಿಯ ವಿರುದ್ಧ ಚುನಾವಣಾ ಕಣಕ್ಕೆ ಇಳಿಯುವುದಾಗಿ ಘೋಷಿಸಿರುವ ಶಿರೂರು ಮಠದ ಶ್ರೀಲಕ್ಷ್ಮೇವರ ತೀರ್ಥರನ್ನು ಮನವೊಲಿಸುವುದಕ್ಕೆ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಯತ್ನಿಸಿದ್ದು, ಶ್ರೀಗಳು ತಮ್ಮ ನಿಲುವನ್ನು ಸಡಿಲಿಸಿಲ್ಲ.

Shiruru Shri Contest Election
  • Facebook
  • Twitter
  • Whatsapp

ಉಡುಪಿ: ಉಡುಪಿಯಲ್ಲಿ ಬಿಜೆಪಿಯ ವಿರುದ್ಧ ಚುನಾವಣಾ ಕಣಕ್ಕೆ ಇಳಿಯುವುದಾಗಿ ಘೋಷಿಸಿರುವ ಶಿರೂರು ಮಠದ ಶ್ರೀಲಕ್ಷ್ಮೇವರ ತೀರ್ಥರನ್ನು ಮನವೊಲಿಸುವುದಕ್ಕೆ ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಯತ್ನಿಸಿದ್ದು, ಶ್ರೀಗಳು ತಮ್ಮ ನಿಲುವನ್ನು ಸಡಿಲಿಸಿಲ್ಲ.

ಬಿಜೆಪಿಯ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್‌ ಶೆಟ್ಟಿ ಅವರು ಶನಿವಾರ ಸಂಜೆ ಶಿರೂರು ಶ್ರೀಗಳನ್ನು ಭೇಟಿಯಾಗಿ, ಶ್ರೀಗಳೊಂದಿಗೆ ದೂರವಾಣಿಯಲ್ಲಿ ಯಡಿಯೂರಪ್ಪ ಅವರ ಮಾತುಕತೆ ಮಾಡಿಸಿದ್ದಾರೆ.

ಯಡಿಯೂರಪ್ಪ ಅವರು ದುಡುಕದಂತೆ ಶ್ರೀಗಳಿಗೆ ಮನವಿ ಮಾಡಿದ್ದಾರೆ. ಪಕ್ಷದ ಬಗ್ಗೆ ಬೇಸರ ಇದ್ದರೆ ಸರಿಪಡಿಸುವ ಭರವಸೆ ನೀಡಿದ್ದಾರೆ. ನಂತರ ಉಡುಪಿ ಸಂಸದೆ ಶೋಭಾ ಅವರೂ ಶ್ರೀಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಸೋಮವಾರ ತಾವೇ ಖುದ್ದು ಬಂದು ಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ಆದರೆ ಶ್ರೀಗಳು ತಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದು ಇಬ್ಬರು ನಾಯಕರಿಗೂ ತಿಳಿಸಿರುವುದಾಗಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಶಿರೂರು ಶ್ರೀಗಳು ಬಿಜೆಪಿಯ ಕೆಲವು ಸ್ಥಳೀಯ ನಾಯಕರ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದು, ಇದನ್ನು ಒಂದೆರೆಡು ದಿನಗಳಲ್ಲಿ ಮಾತುಕತೆಯ ಮೂಲಕ ಸರಿಪಡಿಸಲಾಗುವುದು ಎಂದು ಉದಯಕುಮಾರ್‌ ಶೆಟ್ಟಿಹೇಳಿದ್ದಾರೆ.

Follow Us:
Download App:
  • android
  • ios