Asianet Suvarna News Asianet Suvarna News

ಶಿರೂರು ಸ್ವಾಮೀಜಿಗಳ ಆರಾಧನೆ ಮುಂದೂಡಿಕೆ

ಶಿರೂರು ಶ್ರೀಗಳದ್ದು ಅಸಹಜ ಸಾವಲ್ಲ. ಅವರಿಗೆ ವಿಷಪ್ರಾಷನವಾಗಿಲ್ಲ. ಲಿವರ್ ಸಿರೋಸಿಸ್ ಕಾಯಿಲೆಯೇ ಅವರ ಸಾವಿಗೆ ಕಾರಣ  ಎಂದು ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಅದು ಪೊಲೀಸರ ಕೈ ಸೇರಬೇಕಿದೆ. 

Shiruru Shri Aradhana Pooja postponed
Author
Bengaluru, First Published Aug 24, 2018, 12:10 PM IST
  • Facebook
  • Twitter
  • Whatsapp

ಉಡುಪಿ  (ಆ. 24): ಇಂದು ಮತ್ತು ನಾಳೆ ನಡೆಯಬೇಕಿದ್ದ  ಶಿರೂರು ಸ್ವಾಮೀಜಿಗಳ ಆರಾಧನೆ ಮುಂದೂಡಿಕೆಯಾಗಿದೆ. 

ಮೃತರಾಗಿ 13 ನೇ ದಿನಕ್ಕೆ ಆರಾಧನೆ ನಡೆಯಬೇಕಾಗಿತ್ತು. ಆದರೆ ಶ್ರೀಗಳದ್ದು ಅಸಹಜ ಸಾವು ಎನ್ನುವ ಕಾರಣಕ್ಕೆ ಮುಂದೂಡಲಾಗಿತ್ತು. ಅದನ್ನು ಇಂದು ಮತ್ತು ನಾಳೆ ನಿಗದಿಯಾಗಿದ್ದ ಆರಾಧನೆ ಮತ್ತೆ ಮುಂದೂಡಲ್ಪಟ್ಟಿದೆ.  ಮೂಲ ಶೀರೂರು ಮಠ ಇನ್ನೂ ಪೊಲೀಸ್ ಸುಪರ್ದಿಯಲ್ಲಿದೆ. ಸೋದೆಮಠಕ್ಕೆ ಶೀರೂರು ಮೂಲಮಠ ಹಸ್ತಾಂತರವಾಗಿಲ್ಲ.  ಈ ಹಿನ್ನೆಲೆಯಲ್ಲಿ ಆರಾಧನೆಯನ್ನು ಮುಂದೂಡಿಕೆ ಮಾಡಲಾಗಿದೆ. 

ಎಫ್ ಎಸ್ ಎಲ್ ವರದಿಯ ನಿರೀಕ್ಷೆಯಲ್ಲಿದ್ದಾರೆ ಪೊಲೀಸರು.  ವರದಿ ಬಂದ ನಂತರವಷ್ಟೇ ಆರಾಧನೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. 

ಶಿರೂರು ಶ್ರೀಗಳದ್ದು ಅಸಹಜ ಸಾವಲ್ಲ. ಅವರಿಗೆ ವಿಷಪ್ರಾಷನವಾಗಿಲ್ಲ. ಲಿವರ್ ಸಿರೋಸಿಸ್ ಕಾಯಿಲೆಯೇ ಅವರ ಸಾವಿಗೆ ಕಾರಣ  ಎಂದು ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಅದು ಪೊಲೀಸರ ಕೈ ಸೇರಬೇಕಿದೆ. 

Follow Us:
Download App:
  • android
  • ios