ನ್ಯಾಯಾಲಯದ ಮೊರೆ ಹೋದ ಶಿರೂರು ಶ್ರೀ

Shiroor Shri Taken caveat Fro Court
Highlights

ತಮಗೆ ಶಿಷ್ಯನನ್ನು ಸ್ವೀಕರಿಸುವಂತೆ ಒತ್ತಡ ಹೇರುತ್ತಿರುವ ಇತರ ಮಠಾಧೀಶರ ವಿರುದ್ದ, ಮುಂದೆ ಯಾವುದೇ ಬೆಳವಣಿಗೆಯನ್ನು ನಡೆಸದಂತೆ  ನ್ಯಾಯಾಲಯದಿಂದ ಶಿರೂರು ಮಠದ ಶ್ರೀಗಳು ಕೆವಿಯಟ್ ತಂದಿದ್ದಾರೆ.  
 

ಉಡುಪಿ :  ತಮಗೆ ಶಿಷ್ಯನನ್ನು ಸ್ವೀಕರಿಸುವಂತೆ ಒತ್ತಡ ಹೇರುತ್ತಿರುವ ಇತರ ಮಠಾಧೀಶರ ವಿರುದ್ದ, ಯಾವುದೇ ಬೆಳವಣಿಗೆಯನ್ನು ನಡೆಸದಂತೆ  ನ್ಯಾಯಾಲಯದಿಂದ ಶಿರೂರು ಮಠದ  ಶ್ರೀಲಕ್ಷ್ಮೇವರ ತೀರ್ಥರು  ಕೆವಿಯಟ್ ತಂದಿದ್ದಾರೆ.  

ಶಿರೂರು ಶ್ರೀಗಳು ಸಂನ್ಯಾಸಾಶ್ರಮವನ್ನು ಉಲ್ಲಂಘಿಸಿದ್ದಾರೆ, ಅದ್ದರಿಂದ ಅವರು ಶಿಷ್ಯನನ್ನು ಸ್ವೀಕರಿಸಬೇಕು ಎಂದು ಪೇಜಾವರ ಶ್ರೀ ಮತ್ತು ಇತರ ಮಠಾಧೀಶರಿಂದ ಒತ್ತಡ ಹೇರಿದ್ದರು.  

ಇಲ್ಲದಿದ್ದಲ್ಲಿ ಶಿರೂರು ಶ್ರಿಗಳಿಗೆ ಪಟ್ಟದ ದೇವರನ್ನು ನೀಡುವುದಿಲ್ಲ ಎಂಬ ಬೆದರಿಕೆಯನ್ನೂ ಕೂಡ ಒಡ್ಡಿದ್ದರು. ಆದ್ದರಿಂದ ಇದೀಗ  ಈ ಎಲ್ಲಾ ಬೆಳವಣಿಗೆಗಳ ವಿರುದ್ಧ ಶಿರೂರು ಶ್ರೀಗಳು ಕೆವಿಯಟ್ ತಂದಿದ್ದಾರೆ. 

loader