ಜೂ.15ರ ವೇಳೆಗೆ ಶಿರಾಡಿ ಘಾಟ್ ಸಂಚಾರ ಮುಕ್ತ ?

Shiradi Ghat road to open for traffic by mid-June
Highlights

 ರಾಜ್ಯದ ಕರಾವಳಿಯನ್ನು ರಾಜಧಾನಿಯೊಂದಿಗೆ ಸಂಪರ್ಕಿಸುವ ಅತಿ ಪ್ರಮುಖ ರಸ್ತೆಯಾದ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಅಂತಿಮ ಹಂತದಲ್ಲಿದ್ದು ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜೂ.15ರ ವೇಳೆಗೆ ಶಿರಾಡಿ ಘಾಟ್ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. 

ಮಂಗಳೂರು(ಮೇ 20 ) : ರಾಜ್ಯದ ಕರಾವಳಿಯನ್ನು ರಾಜಧಾನಿಯೊಂದಿಗೆ ಸಂಪರ್ಕಿಸುವ ಅತಿ ಪ್ರಮುಖ ರಸ್ತೆಯಾದ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯ ಕಾಂಕ್ರಿಟ್ ಕಾಮಗಾರಿ ಅಂತಿಮ ಹಂತದಲ್ಲಿದ್ದು ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜೂ.15ರ ವೇಳೆಗೆ ಶಿರಾಡಿ ಘಾಟ್ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. 

ಶಿರಾಡಿ ಘಾಟ್ ಮೊದಲ ಹಂತದಲ್ಲಿ 11.77 ಕಿ.ಮೀ. ಕಾಂಕ್ರಿಟ್ ಕಾಮಗಾರಿ ನಡೆಸಲಾಗಿತ್ತು. 2ನೇ ಹಂತದಲ್ಲಿ 12.38 ಕಿ.ಮೀ. ಸೇರಿ ಒಟ್ಟು 24.15 ಕಿ.ಮೀ. ಕಾಂಕ್ರಿಟ್ ಕಾಮಗಾರಿ ಪೂರ್ಣಗೊಳ್ಳಬೇಕು. ಈಗಾಗಲೇ 10 ಕಿ.ಮೀ.ಗಳಷ್ಟು ಕಾಂಕ್ರಿಟ್ ಕಾಮಗಾರಿ ಮುಕ್ತಾಯಗೊಂಡಿದೆ. ಇನ್ನು ಎರಡೂವರೆ ಕಿ.ಮೀ. ಕಾಮಗಾರಿ ಬಾಕಿ ಉಳಿದಿದೆ.

loader