ಜ.11ರ ಬೆಳಿಗ್ಗೆ 7.30ರವರೆಗೆ ಎಲ್ಲ ತರಹದ ವಾಹನಗಳನ್ನು ತಡೆ ಹಿಡಿಯಲಾಗಿದೆ. ವಾಹನಗಳು ಪರ್ಯಾಯವಾಗಿ ಚಾರ್ಮಾಡಿ ಅಥವಾ ಮಾಣಿ-ಮಡಿಕೇರಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಬುಧವಾರ ಸಂಜೆ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಮಗುಚಿ ಭಾರಿ ಪ್ರಮಾಣದ ಅನಿಲ ಸೊರಿಕೆಯಾಗಿದ್ದು ತಕ್ಷಣವೇ ಅನ್ವಯವಾಗುವಂತೆ ಜ.11ರ ಬೆಳಿಗ್ಗೆ 7.30ರವರೆಗೆ ಎಲ್ಲ ತರಹದ ವಾಹನಗಳನ್ನು ತಡೆ ಹಿಡಿಯಲಾಗಿದೆ. ವಾಹನಗಳು ಪರ್ಯಾಯವಾಗಿ ಚಾರ್ಮಾಡಿ ಅಥವಾ ಮಾಣಿ-ಮಡಿಕೇರಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪಾಯಕಾರಿ ಸ್ಥಿತಿ ಉಂಟಾಗಿರುವುದರಿಂದ ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿದ್ದು, ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದೆ.