Asianet Suvarna News Asianet Suvarna News

ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾ ಹೆಸರು ಬದಲು?

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾವನ್ನು ಶ್ಯಾಮಲಾ ಆಗಿ ಪರಿವರ್ತಿಸುವ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ. 
 

Shimla may get renamed as Shyamala
Author
Bengaluru, First Published Oct 22, 2018, 11:30 AM IST
  • Facebook
  • Twitter
  • Whatsapp

ನವದೆಹಲಿ: ಉತ್ತರ ಪ್ರದೇಶದ ಅಲಹಾಬಾದ್ ಅನ್ನು ಯೋಗಿ ಆದಿತ್ಯನಾಥ್ ಸರ್ಕಾರ ಪ್ರಯಾಗ್ ರಾಜ್ ಆಗಿ ಬದಲಿಸಿದ ಬೆನ್ನಲ್ಲೇ, ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾವನ್ನು ಶ್ಯಾಮಲಾ ಆಗಿ ಪರಿವರ್ತಿಸುವ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ. 

ಶಿಮ್ಲಾವನ್ನು ಶ್ಯಾಮಲಾ ಆಗಿ ಪರಿವರ್ತನೆಗೆ ಆಗ್ರಹಿಸಿ ಕೆಲ ಹಿಂದೂ ಸಂಘಟನೆ ಗಳು ಈಗಾಗಲೇ ಬೀದಿಗಿಳಿದಿವೆ. 

ಈ ಕುರಿತು ರಾಜ್ಯ ಆರೋಗ್ಯ ಸಚಿವ ವಿಪಿನ್ ಸಿಂಗ್ ಪರ್ಮಾ ರ್ ಮಾತನಾಡಿ, ‘ದೇಶದ ವಿವಿಧ ಭಾಗಗಳಲ್ಲಿ ಹಲವು ನಗರಗಳ ಹೆಸರು ಬದಲಿಸಲಾಗಿದೆ. ಶಿಮ್ಲಾ ಹೆಸರೂ ಸಹ ಬದಲಾವಣೆಗೆ ಬಯಸಿದಲ್ಲಿ, ಈ ಬಗ್ಗೆ ಪರಿಶೀಲಿಸಲಾಗುವುದು,’ ಎಂದರು.  

Follow Us:
Download App:
  • android
  • ios