ನಟಿಮಣಿಯರ ಮೇಲಿನ ಲೈಂಗಿಕ ದೌರ್ಜನ್ಯ ಇನ್ನೂ ನಿಲ್ಲುತ್ತಿಲ್ಲ. ಖ್ಯಾತ ನಟಿ ಶಿಲ್ಪಾ ಶಿಂಧೆಯ ಮೇಲೆ ನಿರ್ಮಾಪಕ ಸಂಜಯ್ ಕೊಹ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಸಂಜಯ್ ಕೊಹ್ಲಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮುಂಬೈ(ಮಾ.25): ನಟಿಮಣಿಯರ ಮೇಲಿನ ಲೈಂಗಿಕ ದೌರ್ಜನ್ಯ ಇನ್ನೂ ನಿಲ್ಲುತ್ತಿಲ್ಲ. ಖ್ಯಾತ ನಟಿ ಶಿಲ್ಪಾ ಶಿಂಧೆಯ ಮೇಲೆ ನಿರ್ಮಾಪಕ ಸಂಜಯ್ ಕೊಹ್ಲಿ ಲೈಂಗಿಕ ಕಿರುಕುಳ ನೀಡಿದ್ದು, ಸಂಜಯ್ ಕೊಹ್ಲಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

Add Asianetnews Kannada as a Preferred SourcegooglePreferred

‘ಭಾಬಿಜೀ ಘರ್ ಪರ್ ಹೈ’ ಎಂಬ ಟಿವಿ ಶೋನಲ್ಲಿ ಮುಂದುವರೆಯಲು ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ನಿರ್ಮಾಪಕ ಸಂಜಯ್ ಕೊಹ್ಲಿ ಒತ್ತಡ ಹೇರಿದ್ದರು ಎಂದು ಶಿಲ್ಪಾ ದೂರಿದ್ದಾರೆ.

ಶೋನಲ್ಲಿ ಭಾಗವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಶಿಲ್ಪಾ ಪಾತ್ರ ಜನಪ್ರಿಯವಾಗಿತ್ತು. ಮತ್ತೆ ಮುಂದುವರೆಸಲು ತನ್ನೊಂದಿಗೆ ಸಹಕರಿಸುವಂತೆ ನಿರ್ಮಾಪಕ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.