ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ಶಿಲ್ಪಾ, ರಾಹುಲ್ ಕೇವಲ ಸಂಸದರಷ್ಟೆ.ದೇಶದ ಯಾವುದೇ ಮುಖ್ಯ ಸಂಸ್ಥೆಗಳ ಮುಖ್ಯಸ್ಥರಲ್ಲ.

ಬೆಂಗಳೂರು(ಜು.11): ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಚೀನಾ ರಾಯಭಾರಿ ಭೇಟಿ ಮಾಡಿದ್ದನ್ನು ಸಮರ್ಥಿಸಿ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿದ್ದಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಬಲ ಎಂದು ಜರಿದಿದ್ದನ್ನು ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್ ಕಟುವಾಗಿ ಟೀಕಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿರುವ ಶಿಲ್ಪಾ, ರಾಹುಲ್ ಕೇವಲ ಸಂಸದರಷ್ಟೆ.ದೇಶದ ಯಾವುದೇ ಮುಖ್ಯ ಸಂಸ್ಥೆಗಳ ಮುಖ್ಯಸ್ಥರಲ್ಲ.ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಚೀನಾವನ್ನು ಹಣಿಯಲು ಎಲ್ಲ.ಪ್ರಯತ್ನ ನಡೆಸುವಾಗಲೇ ರಾಹುಲ್ ಚೀನಾ ರಾಯಭಾರಿಯ ಭೇಟಿಯ ಹಿಂದಿನ ಕುತಂತ್ರವೇನು ಎಂದು ಪ್ರಶ್ನಿಸಿದ್ದಾರೆ. ಯಾವ ಮಾನದಂಡದ ಮೇಲೆ ರಾಹುಲ್ ರಾಯಭಾರಿಯನ್ನು ಭೇಟಿಯಾದರು? ಈ ಭೇಟಿಯಿಂದ ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ಅವರೇ ಹೇಳಬೇಕು ಎಂದು ಕುಟುಕಿದ್ದಾರೆ.