ಆತ ತನಗಿಂತಲೂ, ತನ್ನ ಹೆಂಡತಿಗಿಂತಲೂ ತನ್ನ ಬೈಕ್  ಅನ್ನೇ ಹೆಚ್ಚು ಪ್ರೀತಿಸುತ್ತಿದ್ದ. ಇದ್ದಕ್ಕಿದ್ದಂತೆ ಅವರ ಬೈಕ್ ಕೈ ಕೊಟ್ಟಿತು. ಒಮ್ಮೆ ದುರಸ್ತಿ ಮಾಡಿ ತಂದರೆ ಮತ್ತೆ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಅದೊಂದು ದಿನ ಗ್ಯಾರೇಜ್ ಗೆ ತೆರಳಿದ್ದಾಗ ಬೈಕ್  ದುರಸ್ತಿಗೆ ಬೈಕ್ ಗೆ ನೀಡಿದ ಅರ್ಧದಷ್ಟು ಹಣ ಬೇಕು ಎಂಬ ಸಂಗತಿ ಅವರಿವಿಗೆ ಬಂದಿದೆ.  ಮನನೊಂದ ಮಾಲೀಕ ಅಂತಿಮಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಿಕಾರಿಪುರ[ನ.15]  ಬೈಕ್ ದುರಸ್ತಿಗೆ [ಬೋರ್‌ ಗೆ ಬಂದಿದೆ] ಸಾಕಷ್ಟು ಹಣ ವ್ಯಯವಾಗುತ್ತದೆ ಎಂದು ಭಯಭೀತನಾದ ವಾಹನ ಪ್ರೇಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿಕಾರಿಪುರದ ಅಂಜನಾಪುರದ ರುದ್ರಪ್ಪ [42] ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೈಕ್ ಮೇಲಿನ ಪ್ರೀತಿ ಒಂದು ಕಡೆ ಇದ್ದರೆ ರುದ್ರಪ್ಪ ಅವರಿಗೆ ಮದ್ಯ ಸೇವನೆ ಅಭ್ಯಾಸವೂ ಇತ್ತು ಎನ್ನಲಾಗಿದೆ. ಮದ್ಯ ಸೇವಿಸಿ ಸಂಜೆ ಗ್ಯಾರೇಜಿಗೆ ಹೋದಾಗ ಬೈಕ್ ಬೋರಿಗೆ ಬಂದ ಸಂಗತಿ ಗೊತ್ತಾಗಿದೆ. ತಕ್ಷಣ ಮನೆಗೆ ಬಂದು ತಂದಿಟ್ಟ ಕ್ರಿಮಿನಾಶಕ ಸೇವಿಸಿದ್ದಾರೆ. ಚಿಕಿತ್ಸೆಯೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪತಿ ಮನೆಗೆ ಬರಲು ತಡವಾಯಿತೆಂದು ಕುಮಟಾದ ಉಪನ್ಯಾಸಕಿ ಆತ್ಮಹತ್ಯೆ

ರುದ್ರಪ್ಪ ಅವರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಹೆಣ್ಣು ಸಿಗಲಿಲ್ಲ ಎಂದು ಆತ್ಮಹತ್ಯೆ, ಗಂಡ ಬೈದಿದ್ದಕ್ಕೆ ಆತ್ಮಹತ್ಯೆ, ಲೇಟಾಗಿ ಬಂದಿದ್ದಕ್ಕೆ ಆತ್ಮಹತ್ಯೆ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ.