ನಿರ್ಲಕ್ಷ್ಯ ವಹಿಸಿದರೆ ಗಂಡಾಂತರವನ್ನು ನೀವೇ ಆಹ್ವಾನಿಸಿಕೊಂಡಂತೆ ಎಂದು ಶಶಿಕಾಂತ್ ದಾಸ್ ಎಚ್ಚರಿಕೆಯನ್ನೂ ನೀಡಿದ್ದಾರೆ.

ನವದೆಹಲಿ (ಜ.16): ಭಾರತದ ಲಾಂಛನ ಮತ್ತು ಚಿಹ್ನೆಗಳ ಜತೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಎಂದು ಆನ್‌'ಲೈನ್ ಶಾಪಿಂಗ್ ತಾಣ ಅಮೆಜಾನ್‌ಗೆ ಆರ್ಥಿಕ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ಶಶಿಕಾಂತ್ ದಾಸ್ ಸೂಚಿಸಿದ್ದಾರೆ. 

ನಿರ್ಲಕ್ಷ್ಯ ವಹಿಸಿದರೆ ಗಂಡಾಂತರವನ್ನು ನೀವೇ ಆಹ್ವಾನಿಸಿಕೊಂಡಂತೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಭಾರತದ ತ್ರಿವರ್ಣ ಧ್ವಜದ ಚಿತ್ರಣವಿರುವ ಕಾಲೊರೆಸು ಮಾರಾಟಕ್ಕಿಟ್ಟಿದ್ದ ಅಮೆಜಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಅಮೆಜಾನ್, ಅದರ ಮಾರಾಟ ಸ್ಥಗಿತಗೊಳಿಸಿತ್ತು. ಜತೆಗೆ ಗಾಂಧೀಜಿ ಭಾವಚಿತ್ರವುಳ್ಳ ಚಪ್ಪಲಿ ಬಿಡುಗಡೆ ಮಾಡಿದ್ದು ಭಾರತೀಯರ ಕೆಂಗಣ್ಣಿಗೆ ಅಮೆಜಾನ್​ ಗುರಿಯಾಗಿತ್ತು.