ಕೋರ್ಟ್‌ ಆದೇಶ ದಿಕ್ಕರಿಸಿ ಸಂಸದೆ ಶಶಿಕಲಾ ಪುಷ್ಪಾ ವರಿಸಿದ ಆಪ್ತ ಸ್ನೇಹಿತ!

news | Tuesday, March 27th, 2018
Suvarna Web Desk
Highlights

ಎಐಎಡಿಎಂಕೆಯ ಪದಚ್ಯುತ ಸಂಸದೆ ಶಶಿಕಲಾ ಪುಷ್ಪಾ ಮತ್ತು ಅವರ ಸ್ನೇಹಿತ, ವಕೀಲ ಡಾ.ಬಿ.ರಾಮಸ್ವಾಮಿ ಅವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸೋಮವಾರ ಇಲ್ಲಿನ ಐಷಾರಾಮಿ ಹೋಟೆಲ್‌ವೊಂದರಲ್ಲಿ ವಿವಾಹದ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.

ನವದೆಹಲಿ: ಎಐಎಡಿಎಂಕೆಯ ಪದಚ್ಯುತ ಸಂಸದೆ ಶಶಿಕಲಾ ಪುಷ್ಪಾ ಮತ್ತು ಅವರ ಸ್ನೇಹಿತ, ವಕೀಲ ಡಾ.ಬಿ.ರಾಮಸ್ವಾಮಿ ಅವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸೋಮವಾರ ಇಲ್ಲಿನ ಐಷಾರಾಮಿ ಹೋಟೆಲ್‌ವೊಂದರಲ್ಲಿ ವಿವಾಹದ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಮೂಲಕ ರಾಮಸ್ವಾಮಿ ಮತ್ತು ಶಶಿಕಲಾ ಪುಷ್ಪಾ ಅವರು ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದಾರೆ. ಡಾ.ಬಿ.ರಾಮಸ್ವಾಮಿ ಅವರ ಮೊದಲನೇ ಪತ್ನಿಯಾದ ಸತ್ಯಪ್ರಿಯಾ(34) ಎಂಬುವರು ತಾವಿನ್ನೂ ಅಧಿಕೃತವಾಗಿ ವಿಚ್ಛೇದನ ಪಡೆದಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ಕಳೆದ ಶುಕ್ರವಾರ ವಿಚಾರಣೆ ನಡೆಸಿದ್ದ ಮದುರೈನ ಕೌಟುಂಬಿಕ ನ್ಯಾಯಾಲಯ ಪದಚ್ಯುತ ಸಂಸದೆ ಶಶಿಕಲಾ ಪುಷ್ಪಾ ಅವರೊಂದಿಗಿನ ರಾಮಸ್ವಾಮಿ ಅವರ ವಿವಾಹದ ಮೇಲೆ ತಡೆ ಹೇರಿತ್ತು.

ಇದರ ಹೊರತಾಗಿಯೂ ನವ ದಂಪತಿ ದೆಹಲಿಯ ಲಲಿತ್‌ ಮಹಲ್‌ ಹೋಟೆಲ್‌ನಲ್ಲಿ ಸೋಮವಾರ ವಿವಾಹವಾಗುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ ಆರೋಪಕ್ಕೆ ತುತ್ತಾಗಿದ್ದಾರೆ.

Comments 0
Add Comment