ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ| ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಮೋದಿ| ಮೋದಿ ಜೊತೆ ದೇಗುಲಕ್ಕೆ ತೆರಳಲು ಶಶಿ ತರೂರ್‌ಗೆ ಅನುಮತಿ ನಿರಾಕರಣೆ| ಪ್ರಧಾನಿ ಕಾರ್ಯಾಲಯದ ವಿರುದ್ಧ ತರೂರ್ ಕೆಂಡಾಮಂಡಲ| 

ತಿರುವನಂತಪುರಂ(ಜ.16): ಪ್ರಧಾನಿ ನರೇಂದ್ರ ಮೋದಿ ಕೇರಳದ ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾಗ, ನಮ್ಮನ್ನು ದೇವಾಲಯ ಪ್ರವೇಶಿಸಲು ಬಿಡಲಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ. 

ಪ್ರಧಾನಿ ಕಚೇರಿಯ ವಿರುದ್ಧ ಶಶಿ ತರೂರ್ ಟ್ವಿಟರ್ ಮೂಲಕ ಹರಿಹಾಯ್ದಿರುವ ತರೂರ್, ತಮ್ಮನ್ನು ಹಾಗೂ ತಮ್ಮ ಜೊತೆಗಿದ್ದ ಸ್ಥಳೀಯ ನಾಯಕರನ್ನು ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಪ್ರವೇಶಿಸಲು ಬಿಡಲಿಲ್ಲ ಎಂದು ಕಿಡಿಕಾರಿದ್ದಾರೆ.

Scroll to load tweet…

ಸ್ವದೇಶ್ ದರ್ಶನ್ ಯೋಜನೆ ಫಲಕವನ್ನು ಅನಾವರಣಗೊಳಿಸಲು ಪ್ರಧಾನಿ ಮೋದಿ ತಿರುವನಂತಪುರಂ ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರನ್ನು ಸ್ವಾಗತಿಸಿದ ಸ್ಥಳೀಯ ಸಂಸದ, ಶಾಸಕ, ಮೇಯರ್ ಮೋದಿ ಅವರೊಂದಿಗೇ ದೇವಾಲಯ ಪ್ರವೇಶಿಸುವವರಿದ್ದರು. ಆದರೆ ನಂತರದಲ್ಲಿ ನಮಗೆಲ್ಲರಿಗೂ ಅವಕಾಶ ನಿರಾಕರಿಸಲಾಯಿತು ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

Scroll to load tweet…

‘ಬಿಜೆಪಿ ಆಡಳಿತದಲ್ಲಿ ದೇವರೂ ಸಹ ರಾಜಕೀಯ ಉದ್ದೇಶಗಳನ್ನು ಈಡೇರಿಸಬೇಕು..’ ಎಂದು ವ್ಯಂಗ್ಯವಾಡಿರುವ ತರೂರ್, ಪ್ರಧಾನಿ ಸಮ್ಮುಖದಲ್ಲಿ ಬೇರೆ ಪಕ್ಷದ ಸದಸ್ಯರು ಪೂಜೆ ಸಲ್ಲಿಸುವುದಕ್ಕೆ ಅವಕಾಶವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.