ಯುವ ಮೋರ್ಚಾ ಬಿಜೆಪಿ ಸದಸ್ಯರಿಂದ ತರೂರ್ ಕಚೇರಿಗೆ ಕಪ್ಪು ಮಸಿ ಟ್ವಿಟರ್ ಮೂಲಕ ಘಟನೆಯನ್ನು ಖಂಡಿಸಿದ ಹಿರಿಯ ಕಾಂಗ್ರೆಸ್ ನಾಯಕ
ನವದೆಹಲಿ[ಜು.16]: ಹಿಂದೂ ಪಾಕಿಸ್ತಾನ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ವಾರದ ನಂತರ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ತಿರುವನಂತಪುರ ಕಚೇರಿ ಮೇಲೆ ಕೆಲವು ಬಲಪಂಥೀಯ ಗುಂಪುಗಳ ಸದಸ್ಯರು ದಾಳಿ ನಡೆಸಿದ್ದಾರೆ.
ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ತರೂರ್, ಯುವ ಮೋರ್ಚಾ ಬಿಜೆಪಿ ಸದಸ್ಯರು ಇಂದು ನನ್ನ ಕಚೇರಿಗೆ ಆಗಮಿಸಿ ಕಚೇರಿಯ ತುಂಬೆಲ್ಲ ಕಪ್ಪು ಮಸಿಯನ್ನು ಸುರಿದು ಪಾಕಿಸ್ತಾನಕ್ಕೆ ತೆರಳು ಎಂಬ ಘೋಷಣೆ ಕೂಗುವುದರ ಜೊತೆಗೆ ಕಚೇರಿಯೊಳಗೆ ಹಿಂದೂ ಪಾಕಿಸ್ತಾನ ಎಂಬ ಘೋಷಣೆಯಿರುವ ಬ್ಯಾನರ್ ಅನ್ನು ಕಟ್ಟಿದ್ದಾರೆ. ಇದು ಪ್ರಜ್ಞಾವಂತ ಸಮುದಾಯವನ್ನು ಹಾದಿ ತಪ್ಪಿಸುವಂತ ನಡೆ’ಎಂದಿದ್ದಾರೆ.
ಕಳೆದ ಬುಧವಾರ ಶಶಿ ತರೂರ್, 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದೂ ಪಾಕಿಸ್ತಾನವಾಗುವ ಜೊತೆಗೆ ಭಾರತ ಸಂವಿಧಾನವನ್ನು ನಾಶ ಮಾಡಲಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಜು.14 ರಂದು ಕೋಲ್ಕತ್ತಾ ಹೈಕೋರ್ಟ್ ಈ ಹೇಳಿಕೆಗೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಿದೆ.
