Asianet Suvarna News Asianet Suvarna News

ಶಶಿತರೂರ್ ಈ ಪದಕ್ಕೆ ಟ್ವೀಟಿಗರು ಸುಸ್ತೋ ಸುಸ್ತು!

ಶಶಿ ತರೂರ್‌ರ 20 ಅಕ್ಷರದ ಪದ ಕೇಳಿ ಟ್ವೀಟಿಗರು ಸುಸ್ತು | ಶಶಿ ತರೂರ್‌, ಆಗಾಗ್ಗೆ ಬಳಸುವ ಪದಗಳು ದೊಡ್ಡ ದೊಡ್ಡ ಆಂಗ್ಲ ಪಂಡಿತರಿಗೂ ಸುಲಭವಾಗಿ ಅರ್ಥವಾಗದು | ಹೊಸ ಹೊಸ ಪದಗಳನ್ನು ಹುಟ್ಟು ಹಾಕುತ್ತಾರೆ ಶಶಿ ತರೂರ್ 

Shashi Tharoor's latest wordplay creates trend in twitter
Author
Bengaluru, First Published Oct 11, 2018, 11:24 AM IST

ನವದೆಹಲಿ (ಅ. 11): ಇಂಗ್ಲೀಷ್‌ನಲ್ಲಿ ಅಪಾರಜ್ಞಾನ ಹೊಂದಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಆಗಾಗ್ಗೆ ಬಳಸುವ ಪದಗಳು ದೊಡ್ಡ ದೊಡ್ಡ ಆಂಗ್ಲ ಪಂಡಿತರಿಗೂ ಸುಲಭವಾಗಿ ಅರ್ಥವಾಗದು.

ಈ ಹಿಂದೆ ಅವರು ಬಳಸಿದ್ದ ಕೆಲವು ಪದಗಳು ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಕೂಡಾ ಆಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಕುರಿತ ತಮ್ಮ ಹೊಸ ಪುಸ್ತಕದ ಬಗ್ಗೆ ವಿವರಣೆ ನೀಡಲು ತರೂರ್‌ 26 ಅಕ್ಷರಗಳುಳ್ಳ ಪದವೊಂದನ್ನು ಬಳಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳುವುದಿರಲಿ, ಅದನ್ನು ಉಚ್ಛಾರ ಮಾಡುವುದೇ ಬಹಳ ಕ್ಲಿಷ್ಟಕರವಾಗಿದೆ. ಶರೂರ್‌ ಬಳಸಿದ ಪದ ಹೀಗಿದೆ.  floccinaucinihilipilification

 

Follow Us:
Download App:
  • android
  • ios