ನವದೆಹಲಿ[ಜ. 19]: 

ಸೋಶಿಯಲ್ ಮಿಡಿಯಾದಲ್ಲಿ #10YearChallengeಬಹಳಷ್ಟು ವೈರಲ್ ಆಗುತ್ತಿದೆ. ಜಗತ್ತಿನಾದ್ಯಂತ ಜನರು 2009 ಹಾಗೂ 2019ರ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾ ತಾರೆಯರು ಸೇರಿದಂತೆ ರಾಜಕೀಯ ನಾಯಕರೂ ತಮ್ಮ ಹಳೆಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ರಾಜಕೀಯ ನಾಯಕರು ಮಾತ್ರ ಈ ಸವಾಲಿನ ಮೂಲಕ ವಿರೋಧ ಪಕ್ಷವನ್ನು ತಿವಿಯಲಾರಂಭಿಸಿದ್ದಾರೆ. ಈ ಟ್ವೀಟ್ ಗಳು ಸಾಮಾಜಿ ಜಾಲತಾಣಗಳಲ್ಲೂ ಬಹಳಷ್ಟು ವೈರಲ್ ಆಗುತ್ತಿವೆ. ಇದೀಗ ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡಾ ಈ #10YearChallenge ಮೂಲಕ ಬಿಜೆಪಿಗೆ ಚಾಟಿ ಬೀಡಿದ್ದಾರೆ.

ಫೋಟೋ ಒಂದನ್ನು ಶೇರ್ ಮಾಡಿಕೊಂಡಿರುವ ತರೂರ್ ರಾಮ ಮಂದಿರದ ಕಲ್ಲುಗಳ ಫೋಟೋ ಶೇರ್ ಮಾಡಿಕೊಂಡು, 2009ರಲ್ಲಿ ಹಾಗೂ 2019ರಲ್ಲಿ ಏನೂ ಬದಲಾವಣೆಯಾಗಿಲ್ಲ. ಕಲ್ಲುಗಳು ಕೂಡಾ ಇದ್ದಲ್ಲೇ ಇವೆ ಎಂದಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ತರೂರ್ ಮತ್ತೊಂದು ಪೋಟೋ ಶೇರ್ ಮಾಡಿಕೊಂಡು ಬಿಜೆಪಿ ಪ್ರಧಾನ ಕಾರ್ಯಾಲಯ ಬದಲಾಗಿರುವುದನ್ನು ತೋರಿಸಿದ್ದಾರೆ. ಈ ಮೂಲಕ ಬಿಜೆಪಿ 2009ರಲ್ಲಿದ್ದ ಪ್ರಧಾನ ಕಚೇರಿ ಕಟ್ಟಡವನ್ನು ಕೆಡವಿ, ಭವ್ಯವಾಗಿ ಕಟ್ಟಿದ್ದಾರೆ. ಆದರೆ ರಾಮ ಮಂದಿರದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

2019ರಲ್ಲಿ #10YearChallenge ಟ್ರೆಂಡ್ ಆಗುತ್ತಿದೆ. ಈ ಮೂಲಕ 10 ವರ್ಷಗಳಲ್ಲಿ ತಾವು ಹೃಗೆ ಬದಲಾಗಿದ್ದೇವೆಂದು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ.