ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದಿದ್ದ ಶಶಿ ಮುಂಡೆವಾಡಿ ಮೇಲೆ ಗುಂಡಿನ ದಾಳಿ

Shashi Mundewadi E
Highlights

  • ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಗೌರಿ ಹಂತಕರ ವಿಚಾರಣೆ ವೇಳೆ ಸಿಕ್ಕಿಬಿದ್ದು, ಪತ್ರಕರ್ತ ರವಿ ಬೆಳಗೆರೆ ಬಂಧನಕ್ಕೂ ಕಾರಣವಾಗಿದ್ದ 
  • ಅಕ್ರಮ ಪಿಸ್ತೂಲ್ ಸಾಗಾಟ ಶಂಕೆ ಹಿನ್ನಲೆಯಲ್ಲಿ ಮುಂಡೆವಾಡಿ ಹಿಡಿದು ತಪಾಸಣೆ ನಡೆಸುವ ವೇಳೆ ಘಟನೆ

ಬೆಂಗಳೂರು: ಸುಪಾರಿ ಹಂತಕ ಶಶಿ ಮುಂಡೆವಾಡಿ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು, ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿರುವ ಘಟನೆ ವಿಜಯಪುರದ ಇಂಡಿ ತಾಲೂಕಿನ ಬರಡೋಲ ಗ್ರಾಮದ ಹೊರ ಭಾಗದಲ್ಲಿ  ನಡೆದಿದೆ.

ಮುಂಡೆವಾಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಅಪಾಯದಿಂದ ಪಾರಾಗಿದ್ದಾನೆಂದು ತಿಳಿದು ಬಂದಿದೆ. 

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಗೌರಿ ಹಂತಕರ ವಿಚಾರಣೆ ವೇಳೆ ಸಿಕ್ಕಿಬಿದ್ದು, ಪತ್ರಕರ್ತ ರವಿ ಬೆಳಗೆರೆ ಬಂಧನಕ್ಕೂ ಕಾರಣವಾಗಿದ್ದ ಶಶಿ ಇಂದು ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ.

ಅಕ್ರಮ ಪಿಸ್ತೂಲ್ ಸಾಗಾಟ ಶಂಕೆ ಹಿನ್ನಲೆಯಲ್ಲಿ ಮುಂಡೆವಾಡಿ ಹಿಡಿದು ತಪಾಸಣೆ ನಡೆಸುವ ವೇಳೆ ಪಿಎಸೈ ಗೋಪಾಲ ಹಳ್ಳೂರ್ ಮೇಲೆ ಚಾಕೂವಿನಿಂದ ಹಲ್ಲೆ ನಡೆಸಿದ್ದಾನೆ. ಪ್ರತಿಯಾಗಿ ಚಡಚಣ ಪಿಎಸೈ ಹಳ್ಳೂರ್ ಗುಂಡು ಹಾರಿಸಿದ್ದಾರೆ.

ಗುಂಡೇಟಿನಿಂದ ಗಾಯಗೊಂಡ ಶಶಿ ಮುಂಡೆವಾಡಿ ಚಡಚಣ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಚಾಕು ಇರಿತಕ್ಕೆ ಒಳಗಾದ ಪಿಎಸೈ ಹಾಗೂ ಓರ್ವ ಪೇದೆಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಕ್ರಮ ಪಿಸ್ತೂಲ್ ಸಾಗಾಟ ಬಗ್ಗೆ ಸಿಕ್ಕಿದ್ದ ಖಚಿತ ಮಾಹಿತಿ ಮೇರೆಗೆ ತಪಾಸಣೆ ನಡೆಸುವ ವೇಳೆ  ಶಶಿ ಮುಂಡೆವಾಡಿ ಪಿಎಸ್​​ಐ ಹಳ್ಳೂರ್​, ಹಾಗೂ ಪೇದೆ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಆಗ ಪಿಎಸ್​ಐ ಗೋಪಾಲ್ ಹಳ್ಳೂರ್ ಗುಂಡಿನ ದಾಳಿ ನಡೆಸಿದ್ದಾರೆ, ಎಂದು ಉತ್ತರ ವಲಯ ಐಜಿ ಅಲೋಕ್ ಕುಮಾರ್​ ಹೇಳಿದ್ದಾರೆ.

loader