ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಚೇರ್ ಮನ್ ಹುದ್ದೆಗೆ ಶಶಾಂಕ್ ಮನೋಹರ್ ವೈಯಕ್ತಿಕ ಕಾರಣಕ್ಕಾಗಿ ರಾಜಿನಾಮೆ ನೀಡಿದ್ದಾರೆ.
ನವದೆಹಲಿ (ಮಾ.15): ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಚೇರ್ ಮನ್ ಹುದ್ದೆಗೆ ಶಶಾಂಕ್ ಮನೋಹರ್ ವೈಯಕ್ತಿಕ ಕಾರಣಕ್ಕಾಗಿ ರಾಜಿನಾಮೆ ನೀಡಿದ್ದಾರೆ.
ಐಸಿಸಿ ಸಿಇಓ ಡೇವಿಡ್ ರಿಚರ್ಡ್ ಸನ್ ಗೆ ರಾಜಿನಾಮೆ ಪತ್ರ ಸಲ್ಲಿಸಿದ್ದು, ಮಂಡಳಿಯ ಘನತೆಯನ್ನು ಎತ್ತಿ ಹಿಡಿಯುವುದಕ್ಕೆ ಸಾಧ್ಯವಾಗುತ್ತಿಲ್ಲ. ನ್ಯಾಯೋಚಿತವಾಗಿ ಹಾಗೂ ನಿಷ್ಪಕ್ಷಪಾತವಾಗಿ ಮಂಡಳಿ
ಕಾರ್ಯನಿರ್ವಹಿಸುವಲ್ಲ ನಾನು ಪ್ರಯತ್ನಿಸಿದ್ದೇನೆ. ಇದೀಗ ವೈಯಕ್ತಿಕ ಕಾರಣದಿಂದ ರಾಜಿನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಶಶಾಂಕ್ ಮನೋಹರ್ ಐಸಿಸಿಗೆ ಮೊದಲ ಸ್ವತಂತ್ರ ಚೇರ್ ಮನ್ ಆಗಿ 2016 ಮೇ ನಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು.
