ಬೆಂಗಳೂರು : ಜೆಡಿಎಸ್ ಮುಖಂಡ ಶರವಣ ಮುಖ್ಯಮಂತ್ರಿ ಭವಿಷ್ಯದ ಬಗ್ಗೆ ಮಾತನಾಡಿದ್ದು, ಸಿಎಂ ಮೇಲೆ ಶನಿ ವಕ್ರದೃಷ್ಟಿ ಬಿದ್ದಿದೆ. ಅನುರಾಧ ನಕ್ಷತ್ರ ವೃಶ್ಚಿಕ ರಾಶಿಯಲ್ಲಿ ಹುಟ್ಟಿರುವ ಸಿಎಂಗೆ ಶನಿಕಾಟ ಆರಂಭವಾಗಿದೆ ಎಂದು ಹೇಳಿದ್ದಾರೆ.

ತುಮಕೂರಿನ ಮಧುಗಿರಿಯಲ್ಲಿ ಮಾತನಾಡಿದ ಅವರು ಸಿಎಂ ಪದವಿ ಸ್ವೀಕರಿಸುವಾಗ ಶನಿದೆಸೆಯಿತ್ತು, ಆ ದೆಸೆ ಕೊನೆ ಭಾಗಕ್ಕೆ ಬಂದಿದೆ. ಶನಿಯೇ ಸಿಎಂ ಬಾಯಿಯಿಂದ ದುರಹಂಕಾರದ ಮಾತುಗಳನ್ನಾಡಿಸುತ್ತಿದೆ ಎಂದು ಹೇಳಿದ್ದಾರೆ.

ಸಿಎಂಗೆ ಜನ ಸೋಲಿನ ಭಾಗ್ಯವನ್ನು ಕೊಡುತ್ತಾರೆ. ಇದೀಗ ಏಳೂವರೆ ಶನಿಕಾಟ ಸಿಎಂಗೆ ನಡೆಯುತ್ತಿದೆ. ಹೀಗಾಗಿ ಶನಿಯೇ ಸಿಎಂ ಬಾಯಲ್ಲಿ ದುರಹಂಕಾರದ ಮಾತುಗಳನ್ನಾಡಿಸುತ್ತಿದ್ದಾನೆ ಎಂದು ಭವಿಷ್ಯ ನುಡಿದಿದ್ದಾರೆ.

ಬಾದಾಮಿಗೆ ಹೋಗಿ ಸ್ಪರ್ಧಿಸಿದರೂ ಕೂಡ ಸಿಎಂಗೆ ಜನ ಬಾದಾಮಿ ತಿನ್ನಿಸುತ್ತಾರೆ ಎಂದು ಶರವಣ ಹೇಳಿದ್ದಾರೆ.