ಪ್ರಮುಖ ಆರೋಪಿ ಷರೀಫ್ ಸೇರಿರಂತೆ ಕಲಂದರ್ ಶಾಫಿ, ಇಬ್ರಾಹಿಂ ಆಗಮಿಸಿ ಶರತ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು.
ಮೈಸೂರು(ಆ.21): ಆರ್'ಎಸ್'ಎಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಷರೀಫ್'ನನ್ನು ಪೊಲೀಸರು ಬಂಧಿಸಿದ್ದಾರೆ. ಜು.7ರಂದು ಮಂಗಳೂರಿನ ಬಿ.ಸಿ. ರಸ್ತೆಯಲ್ಲಿ ಎಫ್'ಝೆಡ್ ಬೈಕಿನಲ್ಲಿ ಬಂದಿದ್ದ ಪ್ರಮುಖ ಆರೋಪಿ ಷರೀಫ್ ಸೇರಿದಂತೆ ಕಲಂದರ್ ಶಾಫಿ, ಇಬ್ರಾಹಿಂ ಆಗಮಿಸಿ ಶರತ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದರು. ನಂತರ ಶರತ್'ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರದ ನಂತರ ಆತ ಕೊನೆಯುಸಿರೆಳೆದಿದ್ದ. ಪ್ರಕರಣ ಸಂಬಂಧ ಈವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ.
