ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಮತ್ತು ಅವರ ಎರಡನೇ ಪತ್ನಿ ದಾಕ್ಷಾಯಿಣಿಯವರಿಗೆ ಬುಧವಾರ ಗಂಡು ಮಗು ಜನಿಸಿದೆ. 83 ವಯಸ್ಸುನಲ್ಲಿ ಶರಣಬಸವಪ್ಪ ಅಪ್ಪನವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಕಲಬುರ್ಗಿ(ನ. 02): ಶ್ರೀ ಶರಣಬಸವೇಶ್ವವರ ಸಂಸ್ಥಾನದ ಪೀಠಾಧಿಪತಿ 83 ವರ್ಷ ವಯಸ್ಸಿನ ಡಾ.ಶರಣಬಸಪ್ಪ ಅಪ್ಪಾ ಅವರ ಪತ್ನಿ ದಾಕ್ಷಾಯಿಣಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಲ್ಲಿಯ ಮಠದ ಭಕ್ತರಲ್ಲಿ ಸಂಭ್ರಮ ಮನೆಮಾಡಿದ್ದು, ನಿನ್ನೆ ಪಟಾಕಿ ಸಿಡಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಂಸ್ಥಾನಕ್ಕೆ ನೂತನ ವಾರಸುದಾರ ಸಿಕ್ಕಂತಾಗಿದೆ.
ಸದ್ಯ ಶರಣ ಬಸಪ್ಪ ಅಪ್ಪಾರವರಿಗೆ 83 ವರ್ಷ ವಯಸ್ಸಾಗಿದೆ. ಗಂಡುಮಗುವಿನೆ ಜನ್ಮಕೊಟ್ಟಿರುವ 40 ವರ್ಷದ ದಾಕ್ಷಾಯಿಣಿ ಅವರು ಶರಣಬಸಪ್ಪನವರಿಗೆ ಎರಡನೇ ಪತ್ನಿಯಾಗಿದ್ದಾರೆ. ಪೀಠಾಧಿಪತಿಯವರು 83ನೇ ವಯಸ್ಸಿನಲ್ಲಿ ಸಂತಾನ ಹೊಂದಿರುವುದು ಹಲವರಿಗೆ ಆಶ್ಚರ್ಯ ವಾಗಿದೆ.
ಸಾವಿರಾರು ಕೋಟಿಯ ಒಡೆಯ ಡಾ. ಶರಣಬಸಪ್ಪ ಹಾಗೂ ದಾಕ್ಷಾಯಿಣಿ ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ. ಆದ್ರೆ ಗಂಡು ಮಗು ಇರಲಿಲ್ಲ, ಇದೀಗ ಗಂಡು ಮಗು ಜನನವಾಗಿರುವುದು ಶರಣಬಸಪ್ಪ ಅಪ್ಪಾ ಕುಟುಂಬದಲ್ಲಿ ಸಂತಸ ತಂದಿದೆ..
ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್
