ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.

ನವದೆಹಲಿ (ಡಿ.17): ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಹಿತಾಸಕ್ತಿ ಸಂಘರ್ಷ ಹಾಗೂ ನ್ಯಾ. ಆರ್.ಎಂ. ಲೋಧಾ ಅವರು ಸಲ್ಲಿಸಿದ್ದ ಆಡಳಿತ ಶಿಫಾರಸುಗಳ ಕುರಿತು ಬಿಸಿಸಿಐ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದ ಒಪ್ಪೊತ್ತಿನಲ್ಲೇ ಪವಾರ್ ಈ ನಿರ್ಧಾರ ತಳೆದಿದ್ದಾರೆ. ‘‘ಲೋಧಾ ಸಮಿತಿ ಶಿಫಾರಸುಗಳ ಕುರಿತು ಸರ್ವೋಚ್ಚ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಗೌರವಿಸುವ ಸಲುವಾಗಿ ಪವಾರ್ ಅಧಿಕಾರ ತ್ಯಾಗ ಮಾಡಿದ್ದಾರೆ’’ ಎಂದು ಎಂಸಿಎ ಜಂಟಿ ಕಾರ‌್ಯದರ್ಶಿ ವಿ.ಪಿ. ಶೆಟ್ಟಿ ತಿಳಿಸಿದ್ದಾರೆ.