ಭಾರತೀಯ ರಾಣಿಯಾಗಿ ಚೈನಾದಲ್ಲಿ ಟ್ರಾವೆಲ್ ಮಾಡೋದೇ ಈ ಸಿನಿಮಾದ ಒಟ್ಟು ಕಥೆ.
ಬೆಂಗಳೂರು(ಅ.04): ನೀಲಿ ಜಗತ್ತಿನ ಪೋಲಿ ರಾಣಿ ಸನ್ನಿ ಲಿಯೋನ್ ಅವರನ್ನೇ ಹಿಂದಿಕ್ಕಿದ್ದಾರೆ ಮಾಸ್ಟರ್ ಪೀಸ್ ಖ್ಯಾತಿಯ ಶಾನ್ವಿ ಶ್ರೀವಾತ್ಸವ್..!
ಹೌದು ಆದರೆ, ಇದು ನೀಲಿ ಜಗತ್ತಿನ ಪುರಾಣ ಅಂತ ಭಾವಿಸಿದರೆ ನಿಮ್ಮ ಊಹೆ ಖಂಡಿತಾ ತಪ್ಪು.
ಚೈನೀಸ್ ಸಿನಿಮಾ ಕಥೆ, 'ದ ಡಾರ್ಕ್ ಲಾರ್ಡ್' ಹೆಸರಿನ ಸಿನಿಮಾಕ್ಕೆ ಸನ್ನಿ ಜಾಗಕ್ಕೆ ಶಾನ್ವಿ ಆಯ್ಕೆ ಆಗಿದ್ದಾರೆ. ತಾರಕ್ ಚಿತ್ರದ ಶೂಟಿಂಗ್ ಮುಗಿಯುತ್ತಿದ್ದಂತೆ ಶಾನ್ವಿ ಈ ಚೈನೀಸ್ ಸಿನಿಮಾದಲ್ಲಿ ನಟಿಸಿಯೂ ಆಗಿದೆ. ಜೊತೆಗೆ ಈಗಾಗಲೇ ಶೂಟಿಂಗ್ ಕೂಡ ಮುಗಿಸಿದ್ದಾರೆ ಶಾನ್ವಿ.
ಭಾರತೀಯ ರಾಣಿಯಾಗಿ ಚೈನಾದಲ್ಲಿ ಟ್ರಾವೆಲ್ ಮಾಡೋದೇ ಈ ಸಿನಿಮಾದ ಒಟ್ಟು ಕಥೆ. ಆದರೆ, ಇದು ಬಿಗ್ ತೆರೆಗೆ ಬರೋ ಸಿನಿಮಾ ಅಲ್ಲ. ವೆಬ್ ಸಿರೀಸ್. ಇರೋ 11 ಎಪಿಸೋಡ್'ಗಳಲ್ಲಿ 7 ಎಪಿಸೋಡ್'ನಲ್ಲಿ ಶಾನ್ವಿ ಕಾಣಿಸಿಕೊಳ್ಳಲಿದ್ದಾರೆ. ಚೈನೀಸ್ ಭಾಷೆಯನ್ನೂ ಕಲಿತು ಡೈಲಾಗ್ ಹೇಳಿರುವುದು ಶಾನ್ವಿಯ ಮತ್ತೊಂದು ವಿಶೇಷ...
