ಪಟನಾ: ಬಿಹಾರ ಮುಜಫ್ಫುರ್‌ಪುರದ ಸರ್ಕಾರಿ ಪೋಷಿತ ಬಾಲಿಕಾ ಗೃಹದಲ್ಲಿ 40 ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣದ ಕುರಿತು ಸಿಎಂ ನಿತೀಶ್ ಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಮುಖ್ಯಮಂತ್ರಿ ಕನ್ಯಾ ಉತ್ತಮ್ ಯೋಜನೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಿತೀಶ್, ಈ ಘಟನೆಯಿಂದ ನಾವು ತಲೆತಗ್ಗಿಸುವಂತಾಗಿದೆ ಮತ್ತು ತಪ್ಪಿತಸ್ಥ ಭಾವನೆ ಕಾಡುತ್ತಿದೆ. 

ಈ ರೀತಿಯ ಘಟನೆಗಳು ಪುನರಾವರ್ತನೆಗೊಳ್ಳದಂತೆ ತಡೆಯಲು ಸಾಂಸ್ಥಿಕ ಕಾರ್ಯವಿಧಾನವೊಂದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು. ಬಾಲಿಕಾ ಗೃಹದಲ್ಲಿ 34 ಬಾಲಕಿಯರ ಮೇಲೆ ದೌಜನ್ಯ ನಡೆದಿತ್ತು.