ಶಿಕ್ಷಣ ಇಲಾಖೆಯಲ್ಲಿ ಶೀತಲ ಸಮರ ; ಶಾಲಿನಿ ರಜನೀಶ್’ಗೆ ವರ್ಗಾವಣಾ ಆದೇಶ; ಇದರ ಹಿಂದಿದ್ದಾರಾ ತನ್ವೀರ್ ಸೇಠ್?

First Published 15, Mar 2018, 3:49 PM IST
Shalini Rajanesh Transfer
Highlights

ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಶೀತಲ ಸಮರ ಮುಂದುವರೆದಿದೆ.  ತನ್ವೀರ್ ಸೇಠ್ ಮತ್ತು ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ನಡುವೆ  ಟಗ್  ಆಫ್ ವಾರ್ ಶುರುವಾಗಿದೆ.  

ಬೆಂಗಳೂರು (ಮಾ. 15): ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಶೀತಲ ಸಮರ ಮುಂದುವರೆದಿದೆ.  ತನ್ವೀರ್ ಸೇಠ್ ಮತ್ತು ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ನಡುವೆ  ಟಗ್  ಆಫ್ ವಾರ್ ಶುರುವಾಗಿದೆ.  

ಶಾಲಿನಿ ರಜನೀಶ್ ವರ್ಗಾವಣೆಗೆ ಪತ್ರ ನೀಡಲಾಗಿದೆ.  ತನ್ವೀರ್ ಸೇಠ್  ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ಅಜಯ್ ಸೇಠ್’ಗೆ ವಹಿಸಿದ್ದಾರೆ. ಸದ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಾಲಿನಿ ರಜನೀಶ್  ಸ್ಕೂಲ್ ಜಿ ಲಿಂಕ್ ಎಂಬ ಖಾಸಗಿ ಕಂಪನಿ ಜೊತೆ ಮಾಹಿತಿ ಹಂಚಿಕೆ ವಿಚಾರವಾಗಿ ಎಂಓಯು ಮಾಡಿಕೊಂಡಿದ್ದರು. ಇದಕ್ಕೆ ವ್ಯಾಪಕ  ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಎಂಒಯುವನ್ನು ರದ್ದುಗೊಳಿಸಿದ್ದರು. ಇದೇ ಇವರ ವರ್ಗಾವಣೆಗೆ ಕಾರಣವಾಯ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.  

ಎಂಓಯು ಕ್ಯಾನ್ಸಲ್ ಆದ ಮೇಲೆ ಸಚಿವ ಮತ್ತು ಕಾರ್ಯದರ್ಶಿಗಳ ನಡುವೆ ಮನಸ್ತಾಪ ಹೆಚ್ಚಾಗಿದೆ ಎನ್ನಲಾಗಿದೆ.   ಕಳೆದ 10 ದಿನಗಳಿಂದ ರಜೆ ನಿಮಿತ್ತ  ಶಾಲಿನಿ ರಜನೀಶ್ ಕರ್ತವ್ಯಕ್ಕೆ ಹಾಜರಾಗಿಲ್ಲ. 

loader