ದೆಹಲಿ(ಅ.01): ಉರಿ ಸೇನಾ ಕೇಂದ್ರದ ಮೇಲೆ ಪಾಕಿಸ್ಥಾನ ಮೂಲದ ಭಯೋತ್ಪಾದಕರು ದಾಳಿ ನಡೆಸಿ, ಭಾರತೀಯ ಸೈನಿಕರ ಸಾವಿಗೆ ಕಾರಣರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರು ಪಾಕ್ ಗಡಿಯನ್ನು ದಾಟಿ 30ಕ್ಕೂ ಹೆಚ್ಚು ಉಗ್ರರನ್ನು ಹೊಡೆದು ಉರುಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಘಟನೆಯಿಂದ ಉಭಯ ದೇಶಗಳ ಗಡಿಯಲ್ಲಿ ಯುದ್ಧ ಭೀತಿ ಉಂಟಾಗಿದ್ದು, ಈ ಹಿನ್ನಲೆಯಲ್ಲಿ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಶಾಂತಿ ಕಾಪಾಡುವಂತೆ ಎರಡು ದೇಶಗಳಲ್ಲಿ ಮನವಿ ಮಾಡಿದ್ದಾರೆ. 

ಭಾರತ-ಪಾಕಿಸ್ತಾನ ನೆರೆ ರಾಷ್ಟ್ರಗಳಾಗಿದ್ದು, ಶಾಂತಿಯನ್ನು ಕಾಪಾಡಬೇಕು ಎಂದು ಟ್ವಿಟ್ಟರ್ ಮೂಲಕ ಶಾಹಿದ್ ಅಫ್ರಿದಿ ಮನವಿ ಮಾಡಿಕೊಂಡಿದ್ದಾರೆ. 

ಉಭಯ ದೇಶಗಳು ಕಾದಾಡುವುದರಿಂದ ಎರಡೂ ದೇಶದ ಮೇಲೂ ಪರಿಣಾಮ ಬೀರಲಿದೆ. ಯುದ್ಧಕ್ಕೆ ಮುಂದಾಗಬೇಡಿ ಎಂದಿದ್ದಾರೆ.

Scroll to load tweet…