ಈ ಹಿಂದೆಯೂ ಅಫ್ರಿದಿ ಯುದ್ದ ಬಿಟ್ಟು ಶಾಂತಿ ಕಾಪಾಡೋಣ ಎಂದು ಉಭಯ ದೇಶಗಳಿಗೆ ಕರೆಕೊಟ್ಟಿದ್ದರು.
ಕರಾಚಿ(ಆ.15): ಪಾಕಿಸ್ತಾನ ಮಾಜಿ ಕ್ರಿಕೆಟ್ ಆಟಗಾರ ಶಾಹೀದ್ ಅಫ್ರಿದಿ, 71ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿರುವ ಭಾರತಕ್ಕೆ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಫ್ರಿದಿ, ‘ಭಾರತಕ್ಕೆ ಸ್ವಾತಂತ್ರ್ಯ ದಿನದ ಶುಭಾಶಯಗಳು. ನೆರೆಹೊರೆಯ ರಾಷ್ಟ್ರಗಳಾದ ನಾವು ಶಾಂತಿ, ಸೌಹಾರ್ದತೆ ಹಾಗೂ ಪ್ರೀತಿಗಾಗಿ ಜತೆಯಾಗಿ ಶ್ರಮಿಸೋಣ. ಮಾನವೀಯತೆ ಮುಂದುವರಿಯಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಅಫ್ರಿದಿಯವರ ಈ ಟ್ವೀಟ್'ಗೆ ಈಗಾಗಲೇ ಸಹಸ್ರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಉಭಯ ದೇಶಗಳ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿಯಿರುವ ಸಂದರ್ಭದಲ್ಲೇ ಅಫ್ರಿದಿ ಟ್ವೀಟ್ ಸಕಾರಾತ್ಮಕವಾಗಿ ಟ್ವೀಟ್ ಮಾಡಿರುವುದು ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಶ್ವದ ಮೂಲೆ ಮೂಲೆಗಳಿಂದ ಮಾತ್ರವಲ್ಲದೇ ಪಾಕ್'ನಿಂದಲೂ ಅಸಂಖ್ಯಾತ ಮಂದಿ ಭಾರತಕ್ಕೆ ಶುಭ ಆಶಿಸಿದ್ದಾರೆ.
ಈ ಹಿಂದೆಯೂ ಅಫ್ರಿದಿ ಯುದ್ದ ಬಿಟ್ಟು ಶಾಂತಿ ಕಾಪಾಡೋಣ ಎಂದು ಉಭಯ ದೇಶಗಳಿಗೆ ಕರೆಕೊಟ್ಟಿದ್ದರು.
