ಇಸ್ಲಾಮಾಬಾದ್(ಅ.3): ಮೊನ್ನೆ ಮೊನ್ನೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದ ಕ್ರಿಕೆಟಿಗ ಶಾಹಿದ್ ಆಫ್ರಿದಿ ಈಗ ಉಲ್ಟಾ ಹೊಡೆದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಕ್ರಿಕೆಟ್ ಶೋವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಆಫ್ರಿದಿ ಪಠಾಣರು ಪಾಕಿಸ್ತಾನದ ಗಡಿ ಕಾಯುತ್ತಿದ್ದಾರೆ ಎಂಬುದನ್ನು ಭಾರತ ಮರೆತಂತಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ನಮ್ಮೆಲ್ಲಾ ಗಡಿಗಳು ಪಾಕ್ ಸೇನಾ ಪಡೆಗಳಿಂದ ಸುರಕ್ಷಿತವಾಗಿವೆ ಎಂದು ಆಫ್ರಿದಿ ಹೇಳಿದ್ದಾರೆ. ಭಾರತದ ಸರ್ಜಿಕಲ್ ದಾಳಿ ಬಳಿಕ ಸರಣಿ ಟ್ವೀಟ್ ಮಾಡಿದ್ದ ಆಫ್ರಿದಿ, ಏಷ್ಯಾದ ಎರಡು ಬಲಿಷ್ಠ ರಾಷ್ಟ್ರಗಳು ಶಾಂತಿ ಕಾಪಾಡಬೇಕು. ಅಲ್ಲದೆ ಪಾಕ್ ಯಾವಾಗಲೂ ಶಾಂತಿ ಬಯಸುವ ರಾಷ್ಟ್ರ ಎಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಶಾಹಿದ್ ಆಫ್ರಿದಿ ಉಲ್ಟಾ ಹೊಡೆದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.