ನವದೆಹಲಿ(ಸೆ.30): ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರ ನೆಲೆಯ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಕುರಿತಂತೆ ಪ್ರತಿಕ್ರಿಯಿಸರುವ ಪಾಕಿಸ್ತಾನಿ ಕ್ರಿಕೆಟಿಗ ಯಾರೂ ಯುದ್ಧಕ್ಕೆ ಮುಂದಾಗುವುದು ಬೇಡ, ಎರಡೂ ರಾಷ್ಟ್ರಗಳು ಶಾಂತಿ ಕಾಪಾಡಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಹಾಗೂ ಪಾಕಿಸ್ತಾನ ನೆರೆ ರಾಷ್ಟ್ರಗಳಾಗಿದ್ದು, ಯುದ್ಧ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ಯುದ್ಧ ಉಭಯ ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಶಾಂತಿಯನ್ನು ಬಯಸುವ ದೇಶ, ಹಾಗೆಯೇ ಇತರ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವಿಟ್ಟುಕೊಳ್ಳಲು ಬಯಸುತ್ತದೆ. ಸಮಸ್ಯೆಗಳು ಮಾತುಕತೆ ಮೂಲಕ ಬಗೆಹರಿಯುತ್ತವೆ ಎನ್ನುವುದಾದರೇ, ಕಠಿಣ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯೇ ಇಲ್ಲ ಎಂದು ಪಾಕ್ ಕ್ರಿಕೆಟಿಗ ಹೇಳಿದ್ದಾರೆ.

ಈ ಹಿಂದೆ ಅಫ್ರಿದಿ, ನಾನು ಭಾರತದಲ್ಲಿ ಕ್ರಿಕೆಟ್ ಆಡುವುದನ್ನು ಎಂಜಾಯ್ ಮಾಡುತ್ತೇನೆ. ಪಾಕಿಸ್ತಾನದ ಜನರಿಗಿಂತ ಭಾರತದ ಅಭಿಮಾನಿಗಳು ನನಗೆ ಹೆಚ್ಚು ಪ್ರೀತಿ ನೀಡಿದ್ದಾರೆ ಎಂದು ಹೇಳುವ ಮೂಲಕ ಪಾಕ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.