ಬಾಲಿವುಡ್'ನ ಬಾದ್ ಷಾ ಆಗಿ ಮೆರೆಯುತ್ತಿರುವ ಹ್ಯಾಂಡ್ ಸಮ್ ಹೀರೋ ಶಾರೂಖ್ ಖಾನ್. ವಿಭಿನ್ನ ಪಾತ್ರಗಳಿಂದ ಸಿನಿ ಪ್ರೇಕ್ಷಕರನ್ನ ರಂಜಿಸುವ ಶಾರೂಖ್, ಹೊಸ ವರ್ಷಕ್ಕೆ ಕೋಟ್ಯಾಂತರ ಅಭಿಮಾನಿಗಳಿಗೆ ಸರ್ ಪ್ರೈಸ್ ಕೊಟ್ಟಿದ್ದಾರೆ. ಶಾರೂಖ್ ಖಾನ್ ಈ ಅವತಾರದಲ್ಲಿ ನೋಡಿ ಫ್ಯಾನ್ಸ್  ನಿಜಕ್ಕೂ ಶಾಕ್ ಆಗಿದ್ದಾರೆ.

ಬೆಂಗಳೂರು (ಜ.02): ಬಾಲಿವುಡ್'ನ ಬಾದ್ ಷಾ ಆಗಿ ಮೆರೆಯುತ್ತಿರುವ ಹ್ಯಾಂಡ್ ಸಮ್ ಹೀರೋ ಶಾರೂಖ್ ಖಾನ್. ವಿಭಿನ್ನ ಪಾತ್ರಗಳಿಂದ ಸಿನಿ ಪ್ರೇಕ್ಷಕರನ್ನ ರಂಜಿಸುವ ಶಾರೂಖ್, ಹೊಸ ವರ್ಷಕ್ಕೆ ಕೋಟ್ಯಾಂತರ ಅಭಿಮಾನಿಗಳಿಗೆ ಸರ್ ಪ್ರೈಸ್ ಕೊಟ್ಟಿದ್ದಾರೆ. ಶಾರೂಖ್ ಖಾನ್ ಈ ಅವತಾರದಲ್ಲಿ ನೋಡಿ ಫ್ಯಾನ್ಸ್ ನಿಜಕ್ಕೂ ಶಾಕ್ ಆಗಿದ್ದಾರೆ.

ಶಾರೂಖಾನ್ ಹೊಸ ಅವತಾರ ನೋಡಿದ್ರೆ ಶಾಕ್ ಆಗೋದು ಗ್ಯಾರೆಂಟಿ. ಶಾರೂಖ್ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಈ ಸಿನಿಮಾನೆ ಜೀರೋ. ಕಿಂಗ್ ಖಾನ್ ತಮ್ಮ ಸಿನಿಮಾ ಕೆರಿಯರ್ ನಲ್ಲಿ ಫಸ್ಟ್ ಟೈಮ್ ಜೀರೋ ಚಿತ್ರದಲ್ಲಿ ಕುಬ್ಜನಾಗಿ ಕಾಣಿಸಿಕೊಂಡಿದ್ದಾರೆ.

ಶಾರೂಖ್ ಖಾನ್ ಮಾಡಿರುವ ಕುಬ್ಜನಾ ಪಾತ್ರವನ್ನ, 1989 ರಲ್ಲಿ ಅಪೂರ್ವ ಸಗೊಧರಾರ್ಗಲ್ ಎಂಬ ತಮಿಳು ಸಿನಿಮಾದಲ್ಲಿ ಕಮಲ್ ಹಾಸನ್ ಮಾಡಿದ್ದರು.

ಈಗ ಶಾರೂಖ್ ಖಾನ್ ಜೀರೋ ಸಿನಿಮಾದಲ್ಲಿ ಕುಬ್ಜನಾಗಿ ಕಾಣಿಸಿಕೊಳ್ಳಲಿದ್ದಾರೆ. ಟೀಸರ್'ಅನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು 5.8 ಅಡಿ ಎತ್ತರ ಇರುವ ಶಾರುಖ್ ಅವರನ್ನು ಟೆಕ್ನಾಲಜಿ ಬಳಸಿಕೊಂಡು ಕುಬ್ಜರಂತೆ ಕಾಣುವಂತೆ ಮಾಡಲಾಗಿದೆ. ಆನಂದ್ ಎಲ್ ರಾಯ್ ಜೀರೋ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ಕಿಂಗ್ ಖಾನ್ ಜೊತೆ ನಾಯಕಿಯರಾಗಿ ಅಭಿನಯಿಸಲಿದ್ದಾರೆ.ಇದೇ ವರ್ಷ ಜೀರೋ ಚಿತ್ರ ತೆರಗೆ ಬರಲಿದೆ.

Scroll to load tweet…