ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌ನಲ್ಲಿ ಕೇರಳ ಮಾದರಿಯಲ್ಲಿ ಸಂಘಟನೆಯೊಂದು ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದು, ಐಸಿಸ್‌ಗೆ ಯುವಕರನ್ನು ಸೇರಿಸುವ ಕಾರ್ಯ ಮಾಡುತ್ತಿದೆ. ಮುಸ್ಲಿಮರು ಎಚ್ಚರದಿಂದ ಇರಬೇಕು ಎಂದು ಮುಸ್ಲಿಂ ಸಂಘಟನೆಯ ಮುಖಂಡರೊಬ್ಬರು ಮಾಡಿದ ಭಾಷಣದ ಸಂಬಂಧ ಮಂಗಳೂರು ಪೊಲೀಸರು ಬುಧವಾರ ತನಿಖೆ ಆರಂಭಿಸಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌ನಲ್ಲಿ ಕೇರಳ ಮಾದರಿಯಲ್ಲಿ ಸಂಘಟನೆಯೊಂದು ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದು, ಐಸಿಸ್‌ಗೆ ಯುವಕರನ್ನು ಸೇರಿಸುವ ಕಾರ್ಯ ಮಾಡುತ್ತಿದೆ. ಮುಸ್ಲಿಮರು ಎಚ್ಚರದಿಂದ ಇರಬೇಕು ಎಂದು ಮುಸ್ಲಿಂ ಸಂಘಟನೆಯ ಮುಖಂಡರೊಬ್ಬರು ಮಾಡಿದ ಭಾಷಣದ ಸಂಬಂಧ ಮಂಗಳೂರು ಪೊಲೀಸರು ಬುಧವಾರ ತನಿಖೆ ಆರಂಭಿಸಿದ್ದಾರೆ.

ಇತ್ತ ಗುಪ್ತಚರ ಇಲಾಖೆಯೂ ನಿಗಾ ಇರಿಸಿದೆ. ಮಂಗಳೂರಿನ ಸೌತ್ ಕೆನರಾ ಸಲಫಿ ಸಂಘಟನೆಯ ಮುಖಂಡ ಇಸ್ಮಾಯಿಲ್ ಶಾಫಿ ಅವರನ್ನು ನಗರ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸರು ವಶಕ್ಕೆ ಪಡೆದು 5-6 ತಾಸು ವಿಚಾರಣೆ ನಡೆಸಿದರು.

ಸಭೆಯೊಂದರಲ್ಲಿ ಭಾಷಣ ಮಾಡಿದ್ದ ಇಸ್ಮಾಯಿಲ್ ಶಾಫಿ, ಬಿ.ಸಿ.ರೋಡ್‌ನಲ್ಲಿ ಕೇರಳ ಮಾದರಿಯಲ್ಲಿ ಯುವಕರನ್ನು ಹಾದಿ ತಪ್ಪಿಸುವ ಗುಂಪೊಂದು ಕಾರ್ಯಾಚರಿಸುತ್ತಿದೆ. ಇದರ ಬಗ್ಗೆ ಎಚ್ಚರದಿಂದ ಇರಬೇಕು ಎಂದಿದ್ದರು. ಅಲ್ಲದೆ ಐಸಿಸ್ ಮಾದರಿಯ ಸಂಘಟನೆಯ ಬಗ್ಗೆ ಭಾಷಣದಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿದ್ದರು.

ಬ್ಯಾರಿ ಭಾಷೆಯಲ್ಲಿ ಮಾಡಿದ ಭಾಷಣದ ಈ ಆಡಿಯೋ ಜಾಲತಾಣಗಳಲ್ಲಿ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು.

(ಸಾಂದರ್ಭಿಕ ಚಿತ್ರ)