ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್'ರನ್ನು ಸುಪ್ರೀಂ ಕೋರ್ಟ್ ಪದಚ್ಯುತಗೊಳಿಸಿದ್ದು, ಮುಂದಿನ ಪ್ರಧಾನಿಯಾಗಿ ನವಾಝ್ ಶರೀಫ್ ಸಹೋದರ ಶಹಬಾಝ್ ಶರೀಫ್'ರನ್ನು ಆಯ್ಕೆ ಮಾಡಲಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಇಸ್ಲಾಮಾಬಾದ್(ಜು.28): ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್'ರನ್ನು ಸುಪ್ರೀಂ ಕೋರ್ಟ್ ಪದಚ್ಯುತಗೊಳಿಸಿದ್ದು, ಮುಂದಿನ ಪ್ರಧಾನಿಯಾಗಿ ನವಾಝ್ ಶರೀಫ್ ಸಹೋದರ ಶಹಬಾಝ್ ಶರೀಫ್'ರನ್ನು ಆಯ್ಕೆ ಮಾಡಲಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಶಹಬಾಝ್ ಶರೀಫ್ ಹಾಲಿ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಂಸತ್ತಿಗೆ ಸ್ಪರ್ಧಿಸಬೇಕಾಗುತ್ತದೆ.

ಕಳೆದ ಚುನಾವಣೆಯಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ನವಾಝ್ ಶರೀಫ್ ಪಕ್ಷಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತು.

ಸಂಸತ್ತಿನಲ್ಲಿ ನವಾಝ್ ಪಕ್ಷವು ಬಹುಮತವನ್ನು ಹೊಂದಿರುವುದರಿಂದ, ಆ ಅಭ್ಯರ್ಥಿಯ ಆಯ್ಕೆಗೆ ಯಾವುದೇ ಅಡಚಣೆಗಳು ಇಲ್ಲ.