ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಶಾದಿ ಶಗುನ್ ಯೋಜನೆ ಅನ್ವಯ ವಿದ್ಯಾರ್ಥಿವೇತನಕ್ಕೆ ಅರ್ಹರಾದ ಅಲ್ಪಸಂಖ್ಯಾತ ಸಮುದಾಯದ ಹೆಣ್ಣಮಕ್ಕಳ ವಿವಾಹಕ್ಕೆ 51,000 ಹಣಕಾಸು ನೆರವು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪದವಿ ಮುಗಿಸಿದ ಅಲ್ಪಸಂಖ್ಯಾತ ಯುವತಿಯರಿಗೆ ಈ ಸೌಲಭ್ಯ ಸಿಗಲಿದೆ.

ಬೆಂಗಳೂರು(ಆ.07):ರಾಜ್ಯ ಕಾಂಗ್ರೆಸ್​​ ಸರ್ಕಾರ ಶಾದಿಭಾಗ್ಯ ಜಾರಿಗೆ ತಂದಾಗ ಬಿಜೆಪಿ ನಾಯಕರು ವಿರೋಧಿಸಿದ್ದು. ಇದೀಗ ಮೋದಿ ಸರ್ಕಾರ ಮುಸ್ಲಿಂ ಯುವತಿಯರ ಉನ್ನತಶಿಕ್ಷಣಕ್ಕಾಗಿ ‘ಶಾದಿ ಶಗುನ್’ ಯೋಜನೆ ಜಾರಿಗೆ ತರಲು ಪ್ಲಾನ್​ ಮಾಡಿಕೊಂಡಿದೆ. ಆದರೆ ರಾಜ್ಯ ಸರ್ಕಾರ ಇದನ್ನು ಶಾದಿ ಭಾಗ್ಯ ಯೋಜನೆಯ ನಕಲು ಎಂದಿದೆ. 

ಕರ್ನಾಟಕ ಸರ್ಕಾರದ ‘ಶಾದಿಭಾಗ್ಯ' ಹಾಗೂ ತೆಲಂಗಾಣದ ‘ಶಾದಿ ಮುಬಾರಕ್' ಯೋಜನೆಯ ರೀತಿಯೇ ಕೇಂದ್ರದ ಸರ್ಕಾರವೂ ‘ಶಾದಿ ಶಗುನ್’ ಯೋಜನೆಯನ್ನು ಜಾರಿಗೆ ತರಲು ಪ್ಲಾನ್​ ಮಾಡಿಕೊಂಡಿದೆ.

ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಶಾದಿ ಶಗುನ್ ಯೋಜನೆ ಅನ್ವಯ ವಿದ್ಯಾರ್ಥಿವೇತನಕ್ಕೆ ಅರ್ಹರಾದ ಅಲ್ಪಸಂಖ್ಯಾತ ಸಮುದಾಯದ ಹೆಣ್ಣಮಕ್ಕಳ ವಿವಾಹಕ್ಕೆ 51,000 ಹಣಕಾಸು ನೆರವು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪದವಿ ಮುಗಿಸಿದ ಅಲ್ಪಸಂಖ್ಯಾತ ಯುವತಿಯರಿಗೆ ಈ ಸೌಲಭ್ಯ ಸಿಗಲಿದೆ. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ಅಧೀನ ಸಂಸ್ಥೆ ಮೌಲಾನಾ ಆಜಾದ್ ಎಜುಕೇಶನ್ ಫೌಂಡೇಶನ್ ಶೈಕ್ಷ ಣಿಕ ಅನುಕೂಲಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.

ಇನ್ನು ಶಾದಿ ಶುಗನ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಸಿದ್ದರಾಮಯ್ಯ, ಶಾದಿಭಾಗ್ಯ ಯೋಜನೆ ತಂದಾಗ ವಿರೋಧಿಸಿದ್ದ ಯಡಿಯೂರಪ್ಪ ಮತ್ತು ಶೋಭಾ ಕರದ್ಲಾಜೆ ಅವರೇ ಇದಕ್ಕೆ ಉತ್ತರಿಸಬೇಕು ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.

ಇನ್ನೂ ಕೇಂದ್ರ ಸರ್ಕಾರದ ಈ ಯೋಜನೆ ನಮ್ಮ ಯೋಜನೆಯ ನಕಲು ಅಂತ ಸಚಿವೆ ಉಮಾಶ್ರೀ ಟೀಕಿಸಿದ್ದಾರೆ.

ಒಟ್ಟಿನಲ್ಲಿ ಕೇಂದ್ರದ ಶಾದಿ ಶಗುನ್​​ ಯೋಜನೆ ಆರಂಭಕ್ಕೂ ಮುನ್ನವೇ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರ ಶಾದಿ ಭಾಗ್ಯ ತಂದಾಗ ರಾಜ್ಯದಲ್ಲಿ ಬಿಜೆಪಿ ವಿರೋಧಿಸಿತ್ತು. ಈಗ ಕೇಂದ್ರದ ಬಿಜೆಪಿ ಸರ್ಕಾರವೇ ಮುಸ್ಲಿಂ ಯುವತಿಯರ ‘ಶಾದಿ ಶಗುನ್’ ಯೋಜನೆ ಜಾರಿಗೆ ತರಲು ಮುಂದಾಗಿದೆ.