ನವದೆಹಲಿ (ಸೆ.29): ಉರಿ ದಾಳಿಯನ್ನು ಖಂಡಿಸಿ ಭಾರತೀಯ ಸೈನಿಕರು ಪಾಕ್ ಸೇನೆಯ ಮೇಲೆ ದಾಳಿ ಮಾಡಿ ಯಶಸ್ವಿಯಾಗಿರುವುದಕ್ಕೆ ಅಮಿತ್ ಶಾ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇ ರೀತಿ ಪ್ರಧಾನಿ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ರರ್ ಹಾಗೂ ಭಾರತೀಯ ಸೇನೆಗೆ ಶಾ ಅಭಿನಂದನೆ ಸಲ್ಲಿಸಿದ್ದಾರೆ.

ಪದೇ ಪದೇ ಭಾರತದ ಗಡಿ ದಾಟಿ ಕದನ ವಿರಾಮ ಉಲ್ಲಂಘನೆ ಮಾಡುವ ಪಾಕ್ ಗೆ ಎಚ್ಚರಿಕೆ ಗಂಟೆಯಾಗಿದೆ. 

ಭಾರತೀಯ ಸೈನಿಕರು ಶೌರ್ಯವನ್ನು ಪ್ರದರ್ಶಿಸಿದ್ದಾರೆ. ಪಾಕ್ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ನಡೆಸಿದ ಶಸ್ತ್ರದಾಳಿಯಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಜೀವಹಾನಿಯಾಗದಂತೆ ಸೈನಿಕರು ಶಸ್ತ್ರದಾಳಿ ನಡೆಸಿರುವುದು ಇದೇ ಮೊದಲು. ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.