ಅಗಾಧ ಪ್ರೀತಿಯಿಂದ ನಡೆದ ಸೆಕ್ಸ್‌ ಅತ್ಯಾಚಾರವಲ್ಲ: ಹೈಕೋರ್ಟ್‌

Sexual Relations due to deep love not rape Bombay High Court says
Highlights

‘ಅಗಾಧವಾದ ಪ್ರೇಮ ವ್ಯವಹಾರ’ ಇದ್ದಾಗ ಇಬ್ಬರು ಪ್ರೇಮಿಗಳು ಲೈಂಗಿಕ ಕ್ರಿಯೆ ನಡೆಸಿದ್ದಲ್ಲಿ, ಪುರುಷನನ್ನು ಅತ್ಯಾಚಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತೀರ್ಪು ನೀಡಿದೆ. ಈ ಮೂಲಕ ಸ್ಥಳೀಯ ನ್ಯಾಯಾಲಯವೊಂದು ವ್ಯಕ್ತಿಯೊಬ್ಬನಿಗೆ ವಿಧಿಸಿದ್ದ 7 ವರ್ಷ ಜೈಲು ಮತ್ತು 10,000 ದಂಡ ರದ್ದುಪಡಿಸಿದೆ.

ಪಣಜಿ: ‘ಅಗಾಧವಾದ ಪ್ರೇಮ ವ್ಯವಹಾರ’ ಇದ್ದಾಗ ಇಬ್ಬರು ಪ್ರೇಮಿಗಳು ಲೈಂಗಿಕ ಕ್ರಿಯೆ ನಡೆಸಿದ್ದಲ್ಲಿ, ಪುರುಷನನ್ನು ಅತ್ಯಾಚಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತೀರ್ಪು ನೀಡಿದೆ. ಈ ಮೂಲಕ ಸ್ಥಳೀಯ ನ್ಯಾಯಾಲಯವೊಂದು ವ್ಯಕ್ತಿಯೊಬ್ಬನಿಗೆ ವಿಧಿಸಿದ್ದ 7 ವರ್ಷ ಜೈಲು ಮತ್ತು 10,000 ದಂಡ ರದ್ದುಪಡಿಸಿದೆ.

ಕ್ಯಾಸಿನೋದಲ್ಲಿ ಬಾಣಸಿಗನಾಗಿದ್ದ ಯೋಗೇಶ್‌ ಪಾಲೇಕರ್‌, ಅದೇ ಕ್ಯಾಸಿನೋದಲ್ಲಿದ್ದ ಯುವತಿಯ ಪ್ರೇಮಿಸುತ್ತಿದ್ದ. ಆಕೆಗೆ ಮದುವೆಯ ಭರವಸೆಯನ್ನೂ ನೀಡಿದ್ದ. ಒಮ್ಮೆ ತನ್ನ ಕುಟುಂಬ ಸದಸ್ಯರಿಗೆ ಪರಿಚಯಿಸಲೆಂದು ಆಕೆಯನ್ನು ಮನೆಗೆ ಕರೆದೊಯಿದ್ದ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಇಬ್ಬರ ನಡುವೆ ಲೈಂಗಿಕ ಸಂಬಂಧ ಏರ್ಪಟ್ಟಿತ್ತು. ಮುಂದೆಯೂ ಇದೇ ರೀತಿ ಹಲವು ಬಾರಿ ಇಬ್ಬರೂ ಲೈಂಗಿಕ ಕ್ರಿಯೆ ನಡೆಸಿದ್ದರು.

ಆದರೆ ಕೆಲ ತಿಂಗಳುಗಳ ಬಳಿಕ ಯುವತಿ ಕೆಳಜಾತಿಗೆ ಸೇರಿದವಳು ಎಂದು ಹೇಳಿ ಪಾಲೇಕರ್‌ ಮದುವೆ ಪ್ರಸ್ತಾಪ ತಳ್ಳಿಹಾಕಿದ್ದ. ಈ ಹಿನ್ನೆಲೆಯಲ್ಲಿ ಆಕೆ ಅತ್ಯಾಚಾರದ ಕೇಸು ದಾಖಲಿಸಿದ್ದಳು. ಕೆಳ ನ್ಯಾಯಾಲಯ ಈ ವಾದ ಒಪ್ಪಿ ಪಾಲೇಕರ್‌ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಯುವತಿ ಮತ್ತು ಯುವಕನ ನಡುವೆ ಪರಸ್ಪರ ಪ್ರೀತಿಯಿರುವುದರಿಂದ, ಇದೊಂದು ಪರಸ್ಪರ ಒಪ್ಪಿಗೆಯ ಲೈಂಗಿಕ ಕ್ರಿಯೆಯಾಗಿದ್ದು, ಸಂತ್ರಸ್ತೆಯ ಮೇಲೆ ದೌರ್ಜನ್ಯ ಎಸಗುವ ಉದ್ದೇಶವಿರಲಿಲ್ಲ ಎಂದ ಹೈಕೋರ್ಟ್‌ ಆತನನ್ನು ಖುಲಾಸೆಗೊಳಿಸಿದೆ.

loader