ಮಹಿಳೆಯರೇ, ನಿಮಗೆ ಕೆಲಸ ಕೊಡ್ತೀವಿ ಅಂತ ಅನಾಮಧೇಯ ಕರೆಗಳು ಬರ್ತಿವೆಯಾ? ಹಾಗಾದರೆ ಎಚ್ಚರ! ಕೆಲಸ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ಕೊಡ್ತಾರೆ. ಇಂತಹುದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಕೆಲಸ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಿರಾತಕ ಅನಂತನಾಥ್ ಹೆಬ್ಬಾರ್ ಅಲಿಯಾಸ್ ದಿನೇಶ್ ಗೌಡ ಕೊನೆಗೂ ಅರೆಸ್ಟ್ ಆಗಿದ್ದಾನೆ.

ಬೆಂಗಳೂರು(ಎ.22): ಮಹಿಳೆಯರೇ, ನಿಮಗೆ ಕೆಲಸ ಕೊಡ್ತೀವಿ ಅಂತ ಅನಾಮಧೇಯ ಕರೆಗಳು ಬರ್ತಿವೆಯಾ? ಹಾಗಾದರೆ ಎಚ್ಚರ! ಕೆಲಸ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ಕೊಡ್ತಾರೆ. ಇಂತಹುದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಕೆಲಸ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಿರಾತಕ ಅನಂತನಾಥ್ ಹೆಬ್ಬಾರ್ ಅಲಿಯಾಸ್ ದಿನೇಶ್ ಗೌಡ ಕೊನೆಗೂ ಅರೆಸ್ಟ್ ಆಗಿದ್ದಾನೆ.

ಕಾರವಾರ ಮೂಲದ ದಿನೇಶ್, ಮಹಿಳೆಯರಂತೆ ಧ್ವನಿ ಬದಲಾಯಿಸಿ ಹೆಣ್ಮಕ್ಕಳಿಗೆ ಕರೆ ಮಾಡುತ್ತಿದ್ದ. ವಾರ್ಷಿಕ 10 ಲಕ್ಷ ಪ್ಯಾಕೇಜ್'​ನ ಉದ್ಯೋಗದ ಆಫರ್ ನೀಡಿ ಆನ್​​​​​​​​​​​'ಲೈನ್'​​​​​​​​​​​ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿ ಅಂತ ಮರುಳು ಮಾಡುತ್ತಿದ್ದ. ಈತನ ಮಾತು ನಂಬಿ ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಒಬ್ಬಳೇ ಸಂದರ್ಶನಕ್ಕೆ ಬರುವಂತೆ ಕರೆದಿದ್ದಾನೆ. ರಾಮನಗರ ಬಳಿಯಿರುವ ಪ್ರತಿಷ್ಠಿತ ರೆಸಾರ್ಟ್​'ಗೆ ಮಹಿಳೆಯನ್ನು ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಇದಕ್ಕೆ ಮಹಿಳೆ ವಿರೋಧಿಸಿದ್ದಾಗ ಜ್ಯೂಸ್​​​​​​​'ನಲ್ಲಿ ಮತ್ತು ಬರುವ ಮಾತ್ರೆ ಹಾಕಿದ ಕುಡಿಯಲು ಕೊಟ್ಟಿದ್ದ.

ದಿನೇಶ್​ ಚಲನವಲನ ಅರಿತ ಮಹಿಳೆ ತನ್ನ ಪತಿ ಹಾಗೂ ಹೋಟೆಲ್​ ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ. ಇನ್ನು ಹೋಟೆಲ್ ಸಿಬ್ಬಂದಿ ಬರುತ್ತಿದ್ದಂತೆ ದಿನೇಶ್ ಎಸ್ಕೇಪ್​ ಆಗಿದ್ದ. ಮಹಿಳೆ ದೂರಿನನ್ವಯ ಪ್ರಕರಣ ದಾಖಲಿಸಿದ್ದ ಯಶವಂತಪುರ ಪೊಲೀಸರು ಆರೋಪಿ ದಿನೇಶನ್ನನು ಬಂಧಿಸಿದ್ದಾರೆ.