ಬಿಎಂಸಿಟಿ ಬಸ್'​ನಲ್ಲಿ  ಓಡಾಡುವ ಮಹಿಳೆಯರೇ ಎಚ್ಚರದಿಂದಿರಿ!  ಇಳಿ ವಯಸ್ಸಲೂ ಎಲ್ಲರೆದುರು ಬಸ್​’ನಲ್ಲಿ ಜಿಪ್​ ತೆರೆದು ಕಾಮಚೇಷ್ಟೆ ಮಾಡಿದ ಕಾಮುಕ..! ಇಂತದ್ದೊಂದು ಘಟನೆ ಕೋರಮಂಗಲದ 100 ಫೀಟ್​ ರಸ್ತೆಯ ಈಝೋನ್​ ಬಳಿ ನಡೆದಿದೆ. 

ಬೆಂಗಳೂರು (ಮಾ. 17):  ಬಿಎಂಸಿಟಿ ಬಸ್'​ನಲ್ಲಿ ಓಡಾಡುವ ಮಹಿಳೆಯರೇ ಎಚ್ಚರದಿಂದಿರಿ! ಇಳಿ ವಯಸ್ಸಲೂ ಎಲ್ಲರೆದುರು ಬಸ್​’ನಲ್ಲಿ ಜಿಪ್​ ತೆರೆದು ಕಾಮಚೇಷ್ಟೆ ಮಾಡಿದ ಕಾಮುಕ..! ಇಂತದ್ದೊಂದು ಘಟನೆ ಕೋರಮಂಗಲದ 100 ಫೀಟ್​ ರಸ್ತೆಯ ಈಝೋನ್​ ಬಳಿ ನಡೆದಿದೆ. 

ಬಿಎಂಟಿಸಿ ಬಸ್’​ನಲ್ಲಿ ಯುವತಿಯೊಬ್ಬಳಿಗೆ ಮುದುಕನೊಬ್ಬ ಕಾಮಚೇಷ್ಠೆ ಮಾಡಿದ್ದಾನೆ. ಇದೇ ಮಾರ್ಚ್​ 13 ರ ರಾತ್ರಿ 8 ಗಂಟೆ ಸುಮಾರಿಗೆ ಬಿಎಂಟಿಸಿ ಬಸ್​ ನಂ KA 57 F 2654 ನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದಿದೆ. ಯುವತಿ ಕುಳಿತುಕೊಂಡಿದ್ದ ಸೀಟ್​ ಪಕ್ಕದಲ್ಲೇ 65 ವರ್ಷದ ಮುದುಕನೊಬ್ಬ ನಿಂತಿದ್ದ. ಈ ವೇಳೆ ನೀವು ಕುಳಿತುಕೊಳ್ಳುತ್ತೀರಾ ಎಂದು ಕೇಳಿದ್ದ ದೂರುದಾರ ಯುವತಿ ಕೇಳಿದ್ದಾಳೆ. ಆಗ ಆರೋಪಿ ಮುದುಕ ಇಲ್ಲ. ನೀವೆ ಕುಳಿತುಕೊಳ್ಳಿ ಎಂದಿದ್ದ. ಬಳಿಕ ವೃದ್ಧ ತನ್ನ ಪ್ಯಾಂಟ್​’ನ ಜಿಪ್​ ತೆರೆದು ಯುವತಿಯ ಕೈಗೆ ಉಜ್ಜುತ್ತಿದ್ದ. ಆಗ ಗಾಬರಿಗೊಂಡು ಏನು ಮಾಡುತ್ತಿದ್ದಿಯಾ? ಎಂದು ಯುವತಿ ಕೇಳಿದ್ದಾಳೆ. 

ಯುವತಿ ಕೋಪಗೊಂಡಿದ್ದನ್ನು ನೋಡಿ ಆಕೆಯ ಮೇಲೆಯೇ ಮುದುಕ ಎಗರಾಡಿದ್ದಾನೆ. ನಂತರ ಸಹ ಪ್ರಯಾಣಿಕರು ನಿಮ್ಮ ತಂದೆಯ ವಯಸ್ಸಾಗಿದೆ ಹೋಗ್ಲಿ ಬಿಡಮ್ಮ ಎಂದಿದ್ದರು. ಆಗ ಕಾಮುಕ ಮುದುಕನ್ನು ಬಸ್​ ಚಾಲಕ ಮತ್ತು ನಿರ್ವಾಹಕ ಕೆಳಗಿಳಿಸಿದ್ದಾರೆ. ಘಟನೆಯಿಂದ ಬೇಸತ್ತು ಕೋರಮಂಗಲ ಪೊಲೀಸರಿಗೆ ಯುವತಿ ದೂರು ನೀಡಿದ್ದಾಳೆ. ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.